ವೈದ್ಯರ ವಿರುದ್ಧ ಮಹಿಳೆ ದೂರು


01-12-2017 798

ಕೊಪ್ಪಳ: ಹೆರಿಗೆಗೆಂದು ಮಹಿಳೆಯೊಬ್ಬರು ಕೊಪ್ಪಳದ ಗಂಗಾವತಿಯ ಯಶೋಧ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಕರುಳು ಕತ್ತರಿಸಿದ್ದಾರೆಂದು, ನೊಂದ ಮಹಿಳೆ ಆರೋಪಿಸಿದ್ದಾರೆ. ಹೆರಿಗೆಗೆ ದಾಖಲಾಗಿದ್ದ ಹುಲಿಗೆಮ್ಮ ಎಂಬ ಮಹಿಳೆ ವೈದ್ಯರ ವಿರುದ್ಧ ಆರೋಪಿಸಿದ್ದಾರೆ. ವೈದ್ಯೆ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಡಾ.ಪ್ರಭಾ ರಾಯಕರ್, ಡಾ.ಸತೀಶ್ ರಾಯಕರ್ ಹಾಗೂ ಸಿಬ್ಬಂದಿ ಮೇಲೆ, ಗಂಗಾವತಿ ನಗರ ಠಾಣೆಯಲ್ಲಿ ನೊಂದ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Gangavati cesarean ನಿರ್ಲಕ್ಷ್ಯ ನಗರ ಠಾಣೆ