ವೇಶ್ಯಾವಾಟಿಕೆ: ಐವರ ಬಂಧನ


01-12-2017 314

ಬೆಂಗಳೂರು: ಮಾಗಡಿ ರಸ್ತೆ ಸುಂಕದಕಟ್ಟೆಯ ಕಂಫಟ್ರ್ಸ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐವರನ್ನು ಬಂಧಿಸಿ, ಮೂವರು ಯುವತಿಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.

ನಾಗರಬಾವಿಯ ಅಶೋಕ(33), ಮೇಲುಕೋಟೆಯ ಶಶಿಕುಮಾರ್(21), ದೊಡ್ಡಮಳಲವಾಡಿಯ ಶ್ರೀಧರ(30), ವೈದ್ಯನಾಥಪುರದ ಅಭಿಷೇಕ್(27), ಶ್ರೀನಗರದ ನವೀನ್(25), ಬಂಧಿತ ಆರೋಪಿಗಳಾಗಿದ್ದಾರೆ. ದಂಧೆಯಲ್ಲಿದ್ದ  ಹೊರ ರಾಜ್ಯದ ಇಬ್ಬರು ಸೇರಿ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆದುಕೊಂಡು ಬಂದು ಆರೋಪಿಗಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Prostitution Arrested ದಂಧೆ ಹೊರ ರಾಜ್ಯ