ಮುತ್ತತ್ತಿಯಲ್ಲಿ ಯುವಕ ನೀರುಪಾಲು


30-11-2017 469

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆಯು ಮಂಡ್ಯದಲ್ಲಿ ನಡೆದಿದೆ. ಶ್ರೀನಿಧಿ(16) ಎಂದು ಮೃತನನ್ನು ಗುರುತಿಸಲಾಗಿದೆ. ಘಟನೆಯು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ, ಮುತ್ತತ್ತಿಯಲ್ಲಿ ಸಂಭವಿಸಿದೆ. ಈತ ಚಾಮರಾಜನಗರ ಮೂಲದವನಾಗಿದ್ದು, ಡಿಪ್ಲೊಮಾ ಓದುತ್ತಿದ್ದ ಎಂದು ತಿಳಿದು ಬಂದಿದೆ. 13 ಜನ ‌ಸ್ನೇಹಿತರೊಂದಿಗೆ ಬೈಕ್ ನಲ್ಲಿ ಪ್ರವಾಸಕ್ಕೆ ಬಂದಿದ್ದು, ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿದ್ದು, ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Mandya Muthathi ಕಾವೇರಿ ನದಿ ಪ್ರವಾಸ