ಅಂಗಡಿಗಳ ತೆರವಿಗೆ ತೀವ್ರ ವಿರೋಧ


29-11-2017 243

ಬೆಂಗಳೂರು: ಪರಪ್ಪನ ಅಗ್ರಹಾರ ಹಾಗೂ ಚನ್ನಕೇಶವ ನಗರದ ಮುಖ್ಯ ರಸ್ತೆಯ ರಸ್ತೆ ಬದಿ ಅಂಗಡಿಗಳ ತೆರೆವು ಕಾರ್ಯಾಚರಣೆಗೆ ಸ್ಥಳೀಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಪರಪ್ಪನ ಅಗ್ರಹಾರ ಹಾಗೂ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಎರಡು ಬದಿಯ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದನ್ನು ವಿರೋಧಿಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ಪ್ರತಿಭಟನೆಯಿಂದ ಸಂಚಾರ ಅಸ್ಥವ್ಯಸ್ಥಗೊಂಡ ಸುದ್ದಿ ತಿಳಿದ ತಕ್ಷಣ ಹೆಚ್ಚಿನ ಪೊಲೀಸ್ ಸಿಬ್ಬಂದಿ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ರಸ್ತೆ ಬದಿ ಅಂಗಡಿಗಳಿಂದ ಸಮಸ್ಯೆಯಾಗುತ್ತಿದ್ದನ್ನು ಮನಗಂಡು ಬಿಬಿಎಂಪಿಯಿಂದ ಪುಟ್ ಪಾತ್ ತೆರೆವು ಕಾರ್ಯಚರಣೆಗೆ ಜೆಸಿಬಿ ಸಮೇತ ಸ್ಥಳಕ್ಕೆ ಬಂದಾಗ, ಅದನ್ನು ವಿರೋಧಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬಡವರ ಹೊಟ್ಟೆ ಮೇಲೆ ಹೊಡೆಯಲು ಅಂಗಡಿ ತೆರವು ನಡೆಸಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಆಕ್ರೊಶ ವ್ಯಕ್ತಪಡಿಸಿದರು. ಸುಮಾರು 500ಕ್ಕೂ ಹೆಚ್ಚು ಅಂಗಡಿಗಳನ್ನು ಏಕಾಏಕಿ ಖಾಲಿ ಖಾಲಿ ಮಾಡಿಸಲು ಕೇವಲ ಯಂತ್ರಗಳನ್ನು ಕಳುಹಿಸಿ ಯಾವ ಅಧಿಕಾರಿಗಳು ಬಾರದಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ