ರಾಜ್ಯಕ್ಕೆ ‘ರತ್ನ ಪ್ರಭೆ’…!


29-11-2017 916

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಕೆ. ರತ್ನಪ್ರಭ ಅವರನ್ನು ನೇಮಕಗೊಳಿಸಲಾಗಿದೆ. 1981ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ರತ್ನಪ್ರಭ ಅವರು, ಈವರೆಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಅವರನ್ನು ನೇಮಕಮಾಡಲಾಗಿತ್ತು. ಇದೀಗ ರತ್ನಪ್ರಭ ಅವರ ನೇಮಕದ ನಂತರ, ಮೊದಲ ಬಾರಿಗೆ ರಾಜ್ಯದ ಎರಡು ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವಂತಾಗಿರುವುದು ರಾಜ್ಯದ ಮಹಿಳೆಯರ ಜೊತೆಗೆ ಪುರುಷ ವರ್ಗಕ್ಕೂ ಸಂತಸ ತಂದಿರಬಹುದು.

 


ಒಂದು ಕಮೆಂಟನ್ನು ಬಿಡಿ