ಮತ್ತೆ ಬಾರದ ಉಪೇಂದ್ರ…!


28-11-2017 739

ಇತ್ತೀಚೆಗೆ ಬಿಡುಗಡೆಯಾದ ‘ಉಪೇಂದ್ರ ಮತ್ತೆ ಬಾ’ ಸಿನೆಮಾ ಜನರಿಂದ  ಕಡೆಗಣಿಸಲ್ಪಟ್ಟು ಬಾಕ್ಸಾಫೀಸಿನಲ್ಲಿ ಗೋತಾ ಹೊಡೆದಿದೆ ಎಂಬ ವರದಿಗಳು ಬಂದಿವೆ. ಈ ಸಿನೆಮಾದಲ್ಲಿ ಪ್ರೇಮ, ಶೃತಿ ಹರಿಹರನ್ ಮತ್ತು ಹರ್ಷಿಕಾ ಪೂಣಚ್ಚ ಕೂಡ ನಟಿಸಿದ್ದರು.

ರಿಯಲ್ ಸ್ಟಾರ್ ಉಪೇಂದ್ರ ಅವರು, ರಾಜಕಾರಣಕ್ಕೂ ಕಾಲಿಟ್ಟು ತಮ್ಮ ತಾರಾವರ್ಚಸ್ಸನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಉಪೇಂದ್ರ ಅವರ ಈ ಹೊಸ ಸಿನೆಮಾ, ಫ್ಲಾಫ್ ಆಗಿರುವುದು, ಆ ಕಡೆ ತಾರಾ ವರ್ಚಸ್ಸೂ ಇಲ್ಲ, ಈ ಕಡೆ ರಾಜಕೀಯ ಲಾಭವೂ ಆಗಲಿಲ್ಲ ಅನ್ನುವಂತಾಗಿದೆ. ಈ ವಿಚಾರ ಉಪೇಂದ್ರ ಅಭಿಮಾನಿಗಳಿಗಿಂತಲೂ ಸ್ವತಃ ಉಪೇಂದ್ರ ಅವರಲ್ಲೇ ಆತಂಕ ಮೂಡಿಸಿರಬಹುದು. ಇದು, ರಾಜಕೀಯ ಪ್ರವೇಶಿಸಲು ಚಿಂತನೆ ನಡೆಸುತ್ತಿರುವ ಇತರೆ ನಟರಿಗೂ ಒಂದು ಎಚ್ಚರಿಕೆ ಗಂಟೆಯಾಗಿದೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Uendra super star ಸಿನೆಮಾ ‘ಉಪೇಂದ್ರ ಮತ್ತೆ ಬಾ'