ಇಷ್ಟವಿಲ್ಲ ಮದುವೆ ಯುವತಿ ಆತ್ಮಹತ್ಯೆ !


28-11-2017 394

ಬೆಂಗಳೂರು: ನಗರದ ಸಂಪಿಗೆ ಹಳ್ಳಿಯ ಶ್ರೀರಾಂಪುರದಲ್ಲಿ ನಿನ್ನೆ ರಾತ್ರಿ ತನ್ನ ಇಚ್ಛೆಗೆ ವಿರುದ್ಧವಾಗಿ ಮನೆಯವರು ಸೋದರ ಮಾವನೊಂದಿಗೆ ವಿವಾಹ ಮಾಡಿದ್ದರಿಂದ ನೊಂದ ನವ ವಿವಾಹಿತೆ ನೇಣಿಗೆ ಶರಣಾಗಿದ್ದಾರೆ. ಶ್ರೀರಾಂಪುರದ ಟೆಲಿಕಾಂ ಲೇಔಟ್‍ನ ಸ್ವಪ್ನ (28)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗರುತಿಸಲಾಗಿದೆ. ತಿರುಪತಿಯ ದ್ವಾರಕಾ ನಗರದ ಸ್ವಪ್ನಾ ಅವರನ್ನು 4 ತಿಂಗಳ ಹಿಂದಷ್ಟೆ ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಛಲಪತಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಸೋದರ ಮಾವನಾಗಿದ್ದ ಛಲಪತಿಗೆ ಮನೆಯವರು ತನ್ನ ಇಚ್ಚೆಗೆ ವಿರುದ್ಧವಾಗಿ ವಿವಾಹ ಮಾಡಿದ್ದರಿಂದ ನೊಂದ ಸ್ವಪ್ನ, ರಾತ್ರಿ 8ರ ವೇಳೆ ಪತಿ ಕೆಲಸಕ್ಕೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Suicide married women ಶ್ರೀರಾಂಪುರ ಎಂಜಿನಿಯರ್