ರಮ್ಯಾಗೆ ಕಾಂಗ್ರೆಸ್ ಕಾರ್ಯಕರ್ತರ ಮನವಿ


27-11-2017 759

ಮಂಡ್ಯ: ರಮ್ಯಾ ಬೆಂಬಲಕ್ಕೆ ನಿಂತ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ರಾಜಕಾರಣ ಪ್ರವೇಶಿಸುವಂತೆ ರಮ್ಯಾಗೆ ಆಹ್ವಾನ ಮಾಡಿದ್ದಾರೆ. ಮಂಡ್ಯ ಅಥವ ಜಿಲ್ಲೆಯ ಯಾವುದಾದರೂ ಒಂದು ವಿಧಾನ ಸಭಾ  ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತಂತೆ, ಮಂಡ್ಯ ಜಿಲ್ಲಾ ಕಾಂಗ್ರೆಸ್, ಎಐಸಿಸಿ, ಕೆಪಿಸಿಸಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ನಿರ್ಧಾರಿಸಲಾಗಿದೆ ಎಂದು, ಮಂಡ್ಯದಲ್ಲಿ ಕೆ.ಆರ್.ಡಿ.ಸಿ.ಎಲ್.ನಿರ್ದೇಶಕ ಶಶಿಕುಮಾರ್ ಹೇಳಿದ್ದಾರೆ. ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ರಾಜಕಾರಣ ಪ್ರವೇಶ ಮಾಡುವಂತೆ ರಮ್ಯಾರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ramya spandana Mandya ಕಾರ್ಯಕರ್ತ ನಿರ್ದೇಶಕ