‘ಚಂಪಾ ಹಾಗು ಸಿಎಂ ಕ್ಷಮೆ ಕೇಳಬೇಕು’


27-11-2017 618

ಶಿವಮೊಗ್ಗ: ಚಂದ್ರಶೇಖರ ಪಾಟೀಲ ಅವರು ಚಂಪಾ ಅಲ್ಲ, ಸಿದ್ದರಾಮಯ್ಯ ಅವರ ಚಮಚಾ ಎಂದು ವಿಪಕ್ಷ ನಾಯಕ‌ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಇಡೀ ಭಾಷಣ ಒಂದು ದುರಂತ. ರಾಜಕೀಯ ಭಾಷಣದ ಮೂಲಕ ಚಂಪಾ ಅವರು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕನ್ನಡ, ಸಾಹಿತ್ಯ ಪರಿಷತ್ ವೇದಿಕೆ ದುರುಪಯೋಗ ಮಾಡಿಕೊಂಡಿರುವ ಚಂಪಾ ಹಾಗೂ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಚಂಚಾ ಅವರು ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಲಿ. ಕಾಂಗ್ರೆಸ್ ನವರದ್ದು ಭಂಡತನದ ಸರ್ಕಾರ. ಇದರಿಂದಾಗಿ ನಾವು ಜನರ ಮುಂದೆ ಹೋಗುತ್ತಿದ್ದೇವೆ ಎಂದರು.


ಒಂದು ಕಮೆಂಟನ್ನು ಬಿಡಿ