ಭಯ ಹುಟ್ಟಿಸಿದ ಹೊಗೆ..!


24-11-2017 683

ಬೆಂಗಳೂರು: ನಗರದಲ್ಲಿ ಪೊಲೀಸ್ ತರಬೇತಿ ವೇಳೆ ಅಕಸ್ಮಿಕವಾಗಿ ಟಿಯರ್ ಗ್ಯಾಸ್ ಸಿಡಿದು ಅವಾಂತರ ಸೃಷ್ಟಿಯಾದ ಘಟನೆ ಬಿನ್ನಿ ಮಿಲ್ ಬಳಿ ನಡೆದಿದೆ. ಟಿಯರ್ ಗ್ಯಾಸ್ ಸಿಡಿದು ಬಿನ್ನಿಮಿಲ್‍ನಿಂದ ಶಿರಸಿ ಸರ್ಕಲ್ ವರೆಗೆ ಅವರಿಸಿದ ಹೊಗೆಯಿಂದ ಕೆಲಕಾಲ ಸ್ಥಳೀಯರು ಆತಂಕಗೊಂಡಿದ್ದರು. ಟಿಯರ್ ಗ್ಯಾಸ್ ಸಿಡಿತದಿಂದ  ಬಂದ ಹೊಗೆ ಅಲ್ಲಿನ ನಿವಾಸಿಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿ ಕಣ್ಣು ಉರಿ ಉಂಟಾಗಿದ್ದರಿಂದ ಕೆಲ ಕಾಲ ಶಿರಸಿ ಸರ್ಕಲ್ ನಿಂದ ಬಿನ್ನಿ ಮಿಲ್ ವರೆಗೆ ವಾಹನ ಸಂಚಾರ ಸ್ಥಗಿತ ಗೊಳ್ಳಿಸಲಾಗಿತ್ತು. ಗಲಾಟೆ ಗಲಭೆಗಳಾದ ಸಮಯದಲ್ಲಿ ಜನರನ್ನು ಚದುರಿಸಲು ಬಳಸುವ ಟಿಯರ್ ಗ್ಯಾಸ್ ಅಕಸ್ಮಿಕವಾಗಿ ಸಿಡಿದು ಈ ಘಟನೆ ಸಂಭವಿಸದೆ ಎಂದು ತಿಳಿದುಬಂದಿದೆ.


ಒಂದು ಕಮೆಂಟನ್ನು ಬಿಡಿ