ಅನೈತಿಕ ಸಂಬಂಧ: ಮಹಿಳೆ ಆತ್ಮಹತ್ಯೆ


24-11-2017 1292

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಯುವಕ ಬೇರೆ ಯುವತಿಯನ್ನು ಮದುವೆಯಾಗಿ ದೂರ ಹೋಗಿದ್ದರಿಂದ ಮನನೊಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಿನ್ನೆ ರಾತ್ರಿ ಶ್ರೀರಾಂಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಶ್ರೀರಾಂಪುರದ ಈಶ್ವರಿ (32)ಎಂದು ಗುರುತಿಸಲಾಗಿದೆ.10 ವರ್ಷಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣ ಎಂಬುವನನ್ನು ವಿವಾಹವಾಗಿದ್ದ ಈಶ್ವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇವರ ಮನೆಗೆ ಬಂದಿದ್ದ ದೂರದ ಸಂಬಂಧಿ ಜಾನ್‍ಕುಮಾರ್ ಎಂಬ ಯುವಕನ ಜೊತೆ ಈಶ್ವರಿ ಅನೈತಿಕ ಸಂಬಂಧ ಹೊಂದಿದ್ದು, ಇತ್ತೀಚಿನವರೆಗೂ ಆತ ಈಶ್ವರಿ ಮನೆಯಲ್ಲಿಯೇ ನೆಲೆಸಿದ್ದ.

ಐದು ತಿಂಗಳ ಹಿಂದೆ ಮನೆ ಬಿಟ್ಟು ಹೋದ ಜಾನ್‍ಕುಮಾರ್ ಬೇರೊಂದು ಮದುವೆಯಾಗಿ ಆಕೆಯೊಂದಿಗೆ ನೆಲೆಸಿದ್ದು, ಇದರಿಂದ ಮನನೊಂದಿದ್ದ ಆಕೆ, ಗಂಡನ ಜೊತೆಯೂ ಸರಿಯಾಗಿ ಬಾಳಲು ಸಾಧ್ಯವಾಗಲಿಲ್ಲ. ಸಂಬಂಧ ಹೊಂದಿದ್ದ ಯುವಕ ಬಿಟ್ಟು ಹೋಗಿದ್ದಾನೆ ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‍ನೋಟ್ ಬರೆದಿಟ್ಟು ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿರುವ ಶ್ರೀರಾಂಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

women death Srirampura ಅನೈತಿಕ ಡೆತ್‍ ನೋಟ್