ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಭಟನೆ ಬಿಸಿ


24-11-2017 1365

ಮೈಸೂರು: ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ರಾಮನಗರ, ಚನ್ನಪಟ್ಟಣ, ಮಾಗಡಿಯಿಂದ ಬಂದ ಸಾಹಿತ್ಯಾಸಕ್ತರನ್ನು ಕಡೆಗಣಸಿದ್ದಾರೆ ಎಂದು, ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಜಿಲ್ಲೆಗೆ ಯಾವುದೇ ಕೌಂಟರ್ ತೆರದಿಲ್ಲ ಎಂದು ಸ್ವಾಗತ ಸಮಿತಿ ವಿರುದ್ಧ ಸಾಹಿತ್ಯ ಪ್ರಿಯರು ಗರಂ ಆಗಿದ್ದಾರೆ. ಇದನ್ನು ಖಂಡಿಸಿ ಮಹರಾಜ ಕಾಲೇಜು ಮೈದಾನದ ಮುಖ್ಯ ದ್ವಾರದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ