ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ


22-11-2017 664

ಚಿಕ್ಕಮಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಬೋರಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ. ಉದ್ಯಮ ಶೀಲತಾ ತಪಾಸಣಾ ವರದಿ ಪತ್ರ ನೀಡಲು, 10 ಸಾವಿರ ಹಣದ ಬೇಡಿಕೆ ಇಟ್ಟಿದ್ದ ಬೋರಯ್ಯ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಪರಿಶಿಷ್ಟ ಜಾತಿಗೆ ನೀಡುವ ಉದ್ಯಮ ಶೀಲತಾ ತಪಾಸಣಾ ವರದಿ ಪತ್ರವನ್ನು, ಹೇಮಾವತಿ ಆನಂದ ನಾಯ್ಕ ದಂಪತಿಗೆ ನೀಡಬೇಕಾಗಿದ್ದು, ಈ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬೋರಯ್ಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತರೀಕೆರೆ ಹಾಗೂ ಕಡೂರು ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿದ್ದು, ಮುಂಗಡವಾಗಿ ಐದು ಸಾವಿರ ಪಡೆದಿದ್ದು ಉಳಿದ ಮೊತ್ತಕ್ಕಾಗಿ ಕಡೂರು ಬಸ್ ನಿಲ್ದಾಣದ ಬಳಿಯ ಹೋಟೆಲ್ಗೆ ಬರುವಂತೆ ಹೇಳಿದ್ದ ಅಧಿಕಾರಿ ಹಣ ಪಡೆಯುವ ವೇಳೆಯಲ್ಲಿ ಎಸಿಬಿ ದಾಳಿ ನಡೆಸಿ, ಐದು ಸಾವಿರ ಹಣದೊಂದಿಗೆ ವಶಕ್ಕೆ ಪಡೆದಿದ್ದಾರೆ. ಇನ್ನು ಬೋರಯ್ಯನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Chikkamagaluru ACB ಲಂಚ ಪರಿಶಿಷ್ಟ ಜಾತಿ