ಮದುವೆ ಬೇಡವೆಂದು ಯುವಕ ಆತ್ಮಹತ್ಯೆ


21-11-2017 234

ಬೆಂಗಳೂರು: ವಿವಾಹ ಮಾಡಿಕೊಳ್ಳುವಂತೆ ವಯಸ್ಸಾದ ಪೋಷಕರು ಗೋಗರಿಯುತ್ತಿದ್ದರಿಂದ ನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರ್ತೂರಿನ ಮಳ್ಳೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ. ವರ್ತೂರಿನ ಮಳ್ಳೂರಿನಲ್ಲಿ ನೆಲೆಸಿದ್ದ. ಮಧ್ಯಪ್ರದೇಶ ಮೂಲದ ಅಜಯ್ (23)ಎಂದು ಆತ್ಮಹತ್ಯೆ ಶರಣಾದವರನ್ನು ಗುರುತಿಸಲಾಗಿದೆ. ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಅಜಯ್ ಗೆ ಮಧ್ಯಪ್ರದೇಶದಲ್ಲಿ ನೆಲೆಸಿರುವ ವಯಸ್ಸಾದ ಪೋಷಕರು, ಹುಡುಗಿಯ ಫೋಟೋ ಕಳುಹಿಸಿ ಮದುವೆ ಮಾಡಿಕೊಳ್ಳುವಂತೆ ಒತ್ತಡ ತಂದಿದ್ದರು.

ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಅಜಯ್ ಇದೇ ವಿಷಯಕ್ಕೆ ಮನನೊಂದು ಕಳೆದ ರಾತ್ರಿ ಮಳ್ಳೂರಿನ ಹೊರವಲಯದಲ್ಲಿನ ನೀಲಗಿರಿ ತೋಪಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Hang death varthur ಮನನೊಂದು ಮಧ್ಯಪ್ರದೇಶ