ಎಂಇಎಸ್ ಮುಖಂಡ ಬಿಜೆಪಿಗೆ ಸೇರ್ಪಡೆ


21-11-2017 1341

ಬೆಳಗಾವಿ: ಎಂಇಎಸ್ ಮುಖಂಡ ಶಿವಾಜಿ ಸುಂಟಕರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ಬಿಎಸ್ ವೈ ಮತ್ತು ಅನಂತ ಕುಮಾರ್ ಸಮ್ಮುಖದಲ್ಲಿ ಇಂದು ಸೇರ್ಪಡೆಯಾದರು. ಎಂಇಎಸ್ ಒಳ ಜಗಳದಿಂದ ಬೇಸತ್ತು ಬಿಜೆಪಿ ಸೇರ್ಪಡೆಯಾಗಿರುವುದಾಗಿ ಸುಂಟಕರ್ ತಿಳಿಸಿದ್ದಾರೆ.

ಶಿವಾಜಿ ಸುಂಟಕರ್ ಈ ಹಿಂದೆ ಬೆಳಗಾವಿ ಉಪಮೇಯರ್ ಆಗಿದ್ದ ಸಂದರ್ಭದಲ್ಲಿ, ಬೆಳಗಾವಿ ಮಹಾರಾಷ್ಟ್ರ ಸೇರಬೇಕು ಎಂದು ಪಾಲಿಕೆಯಲ್ಲಿ ಅರಚಾಡುತ್ತಿದ್ದರು, ಇದರಿಂದ ಸುಂಟಕರ್ ಮುಖಕ್ಕೆ ಬೆಂಗಳೂರಲ್ಲಿ ಮಸಿ ಬಳಿದು, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸುಂಟಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

MES Belagavi ಶಿವಾಜಿ ಸುಂಟಕರ್ ಉಪಮೇಯರ್