ಭಾರೀ ಟೀಕೆಗೆ ಗುರಿಯಾದ ಮೆರವಣಿಗೆ


21-11-2017 871

ಬಾಗಲಕೋಟೆ: ಜಾಮೀನು ಮೇಲೆ ಜೈಲಿನಿಂದ ಹೊರಬಂದ ಎಂಐಎಂ ಮುಖಂಡರಿಗೆ ಅದ್ದೂರಿ  ಮೆರವಣಿಗೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಟಿಪ್ಪು ಜಯಂತಿ ಅಂಗವಾಗಿ ನಿಷೇಧಾಜ್ಞೆ ನಡುವೆಯೂ, ನವಂಬರ್ 3 ರಂದು ಇಳಕಲ್ಲ ಪಟ್ಟಣದಲ್ಲಿ ಕೆಲ ಮುಖಂಡರು ಮೆರವಣಿಗೆ ಅನುಮತಿ ನೀಡುವಂತೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ನಗರದಲ್ಲಿ ಪೊಲೀಸರ ಮೇಲೆ ಕಲ್ಲೂತೂರಾಟ, ಲಾಠಿ ಚಾರ್ಚ ನಡೆದು, ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು.

ಆ ಘಟನೆಗೆ ಸಂಬಂಧಿಸಿ ಎಂಐಎಂ ಮುಖಂಡ ಉಸ್ಮಾನಗಣಿ ಉಮನಾಬಾದ್, ಜೆಡಿಎಸ್ ಮುಖಂಡ ಜಬ್ಬರ್ ಕಲಬುರ್ಗಿ ಸೇರಿದಂತೆ 13 ಜನರ ಮೇಲೆ ದೂರು ದಾಖಲಾಗಿ ಜೈಲಿಗೆ ಕಳಿಸಲಾಗಿತ್ತು. ನಿನ್ನೆ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಸಂಜೆ ಎಂಐಎಂ ಮುಖಂಡ ಸೇರಿದಂತೆ 13 ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ, ಜಿಲ್ಲಾ ಕೇಂದ್ರ ಕಾರಾಗೃಹದಿಂದ ಆರೋಪಿ ಸ್ಥಾನದಲ್ಲಿರುವವರನ್ನು ಎಂಐಎಂ ಕಾರ್ಯಕರ್ತರು ನೂರಾರು ಬೈಕ್, ಟಂಟಂ ವಾಹನ ಮೂಲಕ ,ಪಟಾಕಿ ಸಿಡಿಸಿ ಅದ್ದೂರಿ ಮೆರವಣಿಗೆ ಮಾಡಿದರು. ಕಣ್ಣು ಮುಂದೆ ಮೆರವಣಿಗೆ ನಡೆಯುತ್ತಿದ್ದರು, ಪೊಲೀಸರು ಮೌನಕ್ಕೆ ಶರಣಾಗಿದ್ದು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bagalkot MIM ಎಂಐಎಂ ನಿಷೇಧಾಜ್ಞೆ