ಜಿಐ ಟ್ಯಾಗ್: ಕರ್ನಾಟಕ ನಂಬರ್ 1


18-11-2017 1067

ಬೆಂಗಳೂರು: ಭೌಗೋಳಿಕವಾಗಿ ವೈಶಿಷ್ಟ್ಯತೆ ಹೊಂದಿರುವ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ನೀಡುವ ಭೌಗೋಳಿಕ ವೈಶಿಷ್ಟ್ಯತೆ ಗುರುತು(ಜಿಐ ಟ್ಯಾಗ್) ಪಡೆಯುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿಯವರೆಗೆ ಕರ್ನಾಟಕದ ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ, ಇಳಕಲ್ ಸೀರೆ, ಮೈಸೂರು ತಾಳೆಗರಿ, ನವಲಗುಂದ ದರಿ, ಕರ್ನಾಟಕ ಹಿತ್ತಾಳೆ ಕರಕುಶಲ ವಸ್ತುಗಳು, ಮೊಳಕಾಲ್ಮೂರು ಸೀರೆ, ಮಾನ್ಸೂನ್ಡ್ ಮಲಬಾರ್ ಅರೇಬಿಕಾ ಕಾಫಿ, ಮಾನ್ಸೂನ್ಡ್ ಮಲಬಾರ್ ರೊಬಸ್ಟಾ ಕಾಫಿ, ಕೊಡಗು ಹಸಿರು ಮೆಣಸು, ಧಾರವಾಡ ಪೇಡ, ದೇವನಹಳ್ಳಿ ಚಕೋತಾ ಹಣ್ಣು, ಅಪ್ಪೆಮಿಡಿ ಮಾವು ಸೇರಿ 40 ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಿದೆ.

ಇದರ ಮಧ್ಯೆಯೇ, ಮೈಸೂರು ಪಾಕ್ ಯಾರಿಗೆ ಸೇರಿದ್ದೆಂಬ ಕುರಿತು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಹಗ್ಗಜಗ್ಗಾಟವೂ ಆರಂಭವಾಗಿರುವುದು ಕುತೂಹಲ ಕೆರಳಿಸಿದೆ. ವಿವಿಧ ಸಂಸ್ಥೆಗಳು, ವ್ಯಕ್ತಿಗಳು, ಸಂಘಟನೆಗಳು ಅರ್ಜಿ ಸಲ್ಲಿಸಿದ್ದರ ಆಧಾರದಲ್ಲಿ 2004ರಿಂದ ಇಲ್ಲಿಯವರೆಗೆ ರಾಜ್ಯದ 40 ಉತ್ಪನ್ನಗಳಿಗೆ ಜಿಐ ಟ್ಯಾಗ್ ಲಭಿಸಿದೆ. ಕರ್ನಾಟಕದಲ್ಲಿ ಭೌಗೋಳಿಕ ವೈಶಿಷ್ಟ್ಯವುಳ್ಳ ಉತ್ಪನ್ನಗಳು ಇನ್ನೂ ಸಾಕಷ್ಟಿವೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ಬೆಳೆಯುವ ಅಡಕೆಗೆ ಟ್ಯಾಗ್ ನೀಡುವಂತೆ ಶಿರಸಿಯ `ದಿ ತೋಟಗಾರ್ಸ್ ಸಹಕಾರ ಮಾರಾಟ ಸಂಸ್ಥೆ' 2013ರಲ್ಲಿ ಅರ್ಜಿ ಸಲ್ಲಿಸಿದೆ. ಉತ್ತಮ ಗುಣಮಟ್ಟದ ಕಲಬುರಗಿ ತೊಗರಿಗೆ ಈ ಮಾನ್ಯತೆ ನೀಡುವಂತೆ ರಾಯಚೂರು ಕೃಷಿ ವಿವಿ ಹಾಗೂ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಗಳು ಸೆಪ್ಟೆಂಬರ್‍ ನಲ್ಲಿ ಅರ್ಜಿ ಸಲ್ಲಿಸಿವೆ.

ಈ ಎರಡೂ ಅರ್ಜಿ ಪರಿಶೀಲನೆಯಲ್ಲಿದೆ. ಸಿಹಿ ತಿನಿಸುಗಳಾದ ಕರದಂಟು, ಮೈಸೂರು ಪಾಕ್, ಮಣ್ಣಿನ ಉತ್ಪನ್ನಗಳು, ಶಿಲ್ಪಕಲಾಕೃತಿಗಳು ಸೇರಿ ರಾಜ್ಯದ ಅನೇಕ ಉತ್ಪನ್ನಗಳು ಜಿಐ ಟ್ಯಾಗ್ ಪಡೆಯಲು ಅರ್ಹವಾಗಿವೆ. ಕರ್ನಾಟಕದ ಉತ್ಪನ್ನಗಳು ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಬಿದರಿ ಕರಕುಶಲ ಉತ್ಪನ್ನಗಳು, ಚನ್ನಪಟ್ಟಣ ಆಟಿಕೆಗಳು ಮತ್ತು ಬೊಂಬೆಗಳು, ಮೈಸೂರು ರಕ್ತಚಂದನ ಕಲೆ, ಮೈಸೂರು ಗಂಧದೆಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಕಸೂತಿ ಎಂಬ್ರಾಯ್ಡರಿ, ಮೈಸೂರು ಸಾಂಪ್ರದಾಯಿಕ ಕಲೆ, ಕೊಡಗು ಕಿತ್ತಳೆ, ಮೈಸೂರು ವೀಳ್ಯದೆಲೆ, ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ, ಇಳಕಲ್ ಸೀರೆ, ಮೈಸೂರು ತಾಳೆಗರಿ, ನವಲಗುಂದ ದರಿ, ಕರ್ನಾಟಕ ಹಿತ್ತಾಳೆ ಕರಕುಶಲ ವಸ್ತುಗಳು, ಮೊಳಕಾಲ್ಮೂರು ಸೀರೆ, ಮಾನ್ಸೂನ್ಡ್ ಮಲಬಾರ್ ಅರೇಬಿಕಾ ಕಾಫಿ, ಮಾನ್ಸೂನ್ಡ್ ಮಲಬಾರ್ ರೊಬಸ್ಟಾ ಕಾಫಿ, ಕೊಡಗು ಹಸಿರು ಮೆಣಸು, ಧಾರವಾಡ ಪೇಢ, ದೇವನಹಳ್ಳಿ ಚಕೋತಾ ಹಣ್ಣು, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆ, ಸಂಡೂರ್ ಲಂಬಾಣಿ ಎಂಬ್ರಾಯ್ಡರಿ, ಬ್ಯಾಡಗಿ ಮೆಣಸಿನಕಾಯಿ, ಉಡುಪಿ ಮಟ್ಟುಗುಳ್ಳ ಬದನೆ, ಕಿನ್ನಾಳ ಆಟಿಕೆಗಳು, ಬೆಂಗಳೂರು ನೀಲಿ ದ್ರಾಕ್ಷಿ, ಬೆಂಗಳೂರು ಗುಲಾಬಿ ಈರುಳ್ಳಿ, ಕರ್ನಾಟಕ ಕಂಚಿನ ಕರಕುಶಲತೆ(ಲೋಗೊ), ಮೈಸೂರು ತಾಳೆ ಗರಿ(ಲೋಗೊ), ನವಲಗುಂದ ದರಿ(ಲೋಗೊ), ಗುಳೇದಗುಡ್ಡ ಕಣ, ಉಡುಪಿ ಸೀರೆಗಳು, ಮೈಸೂರು ಸಿಲ್ಕ್(ಲೋಗೊ), ಮೈಸೂರು ಅಗರ್ಬತ್ತಿ(ಲೋಗೊ). ಸಾಂಸ್ಕೃತಿಕ ನಗರಿ ಮೊದಲು ಸಾಂಸ್ಕೃತಿಕ ನಗರಿ ಮೈಸೂರು, ಜಿಐ ಟ್ಯಾಗ್ ಪಡೆಯುವಲ್ಲಿ ಮೊದಲ ಸ್ಥಾನ ಪಡೆದಿದೆ. ರಾಜ್ಯಕ್ಕೆ ದಕ್ಕಿರುವ 40ರ ಪೈಕಿ 13 ಉತ್ಪನ್ನಗಳು ಮೈಸೂರು ಮೂಲ, ಮೈಸೂರು ಹೆಸರು ಹಾಗೂ ಮೈಸೂರು ಜಿಲ್ಲೆಗೆ(ನಂಜನಗೂಡು ಬಾಳೆಹಣ್ಣು) ಸೇರಿವೆ.


ಒಂದು ಕಮೆಂಟನ್ನು ಬಿಡಿ