19 ಮಂದಿ ವಿದೇಶಿಗರ ಬಂಧನ !


18-11-2017 247

ಬೆಂಗಳೂರು: ನಗರದ ಕೊತ್ತನೂರು ಇನ್ನಿತರ ಕಡೆಗಳಲ್ಲಿ  ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ 19 ಮಂದಿ ವಿದೇಶಿಗರನ್ನು ಕೊತ್ತನೂರು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಸೂಡಾನ್, ನೈಜೀರಿಯಾ ದೇಶದವರಾದ 19 ಮಂದಿಯೂ ವಿದ್ಯಾರ್ಥಿ ಹಾಗೂ ವ್ಯಾಪಾರಿ ವೀಸಾದಡಿ ನಗರಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದು ಹಲವು ದಿನಗಳು ಕಳೆದರೂ ಅಕ್ರಮವಾಗಿ ನೆಲೆಸಿದ್ದರು.

ಕೊತ್ತನೂರು ಸುತ್ತಮುತ್ತ ನೈಜೀರಿಯಾ ಸೇರಿದಂತೆ ಆಫ್ರಿಕನ್ನರ ಹಾವಳಿ, ಅಕ್ರಮ ದಂಧೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮವಾಸಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಗಾಂಜಾ,ಚರಸ್, ಇನ್ನಿತರ ಮಾದಕ ವಸ್ತುಗಳ ಮಾರಾಟದಲ್ಲಿ ವಿದೇಶಿಗರು ತೊಡಗಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕೊತ್ತನೂರು ಅಲ್ಲದೆ ಇನ್ನಿತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಅಕ್ರಮ ವಿದೇಶಿಗರ ಪತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

visa Illegal residents ನೈಜೀರಿಯಾ ದಂಧೆ