ಬಿಗ್ ಬಾಸ್‌ ಗೆ ಶನಿ ಕಾಟ…!


18-11-2017 1526

ಮುಗ್ಧ ಆಸ್ತಿಕ ವೀಕ್ಷಕರನ್ನು ಸೆಳೆಯಲೆಂದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭಿಸಿದ ಶನಿ ಧಾರಾವಾಹಿ. ಈಗಾಗಲೇ ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು ಅದ್ದೂರಿ ನಿರ್ಮಾಣದಿಂದ ಜನರನ್ನು ಆಕರ್ಷಿಸುತ್ತಿದೆ. ಅತ್ಯುತ್ತಮ ದರ್ಜೆಯ ಡಿಜಿಟಲ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಈ ಸೀರಿಯಲ್ ಕನ್ನಡ ಟಿವಿ ಲೋಕದ ಮಟ್ಟಿಗೆ, ನಿರ್ಮಾಣ ಗುಣಮಟ್ಟದಲ್ಲಿ ಮೊದಲನೆಯ ಸ್ಥಾನದಲ್ಲಿರುವಂತೆ ಕಂಡುಬರುತ್ತಿದೆ.

ಈ ಸೀರಿಯಲ್ ನಲ್ಲಿ ತನ್ನ ಮೂಗನ್ನು ಹಿಗ್ಗಿಸಿಕೊಂಡು ಕಣ್ಣುಮೇಲೇರಿಸಿಕೊಂಡು, ತುಟಿಗಳನ್ನು ಬಿಗಿ ಹಿಡಿದು ಬಿರಬಿರನೆ ನಡೆಯುವ ಶನಿ ಪಾತ್ರಧಾರಿ ಯುವಕ, ಒಂದು ಮಟ್ಟಿಗೆ ಕಾಮಿಡಿಯಾಗಿ ಕಂಡುಬಂದರೂ, ದೈವಭಕ್ತ ವೀಕ್ಷಕರೆಲ್ಲರಲ್ಲೂ ಸಂಚಲನ ಉಂಟುಮಾಡಿರುವುದಂತೂ ನಿಜ.

ಈ ಸೀರಿಯಲ್‌ ನ ಒಂದು ಗಂಟೆಯ ಪ್ರತಿ ಕಂತಿಗೆ ಕಲರ್ಸ್ ಕನ್ನಡದವರು ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡುತ್ತಿರುವುದು ಇನ್ನೊಂದು ದಾಖಲೆ. ಆದರೆ, ಈಗಾಗಲೇ ವಿಪರೀತ ಪ್ರಚಾರದೊಂದಿಗೆ ಸೂಪರ್ ಚಾನಲ್‌ ನಲ್ಲಿ ಬರುತ್ತಿರುವ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ, ಶನಿ ಸೀರಿಯಲ್ ಕೂಡ ಅದೇ ಸಮಯದಲ್ಲಿ ಕಲರ್ಸ್ ನಲ್ಲಿ ಬರುತ್ತಿರುವುದು ಚಾನಲ್ ನ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಎಷ್ಟು ಸರಿ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಹಾಗೆಯೇ, ಕಲರ್ಸ್ ಸೂಪರ್ ಚಾನಲ್‌ ನಲ್ಲಿ ಒಂದು ಬಾರಿ 2.7 ಟಿ.ಆರ್‌.ಪಿಯಷ್ಟು ಕೆಳಗಿಳಿದಿದ್ದ ಬಿಗ್ ಬಾಸ್, ಈಗ ಸ್ವಲ್ಪ ಚೇತರಿಸಿಕೊಂಡು 3.8 ಆಗಿರುವುದು ಅಷ್ಟೇನೂ ಖುಷಿಕೊಡುವ ವಿಷಯವಲ್ಲದಿದ್ದರೂ, ಹೆಚ್ಚು ವೆಚ್ಚಮಾಡಿ ತಯಾರಾದ ಶನಿ ಸೀರಿಯಲ್ ಕೂಡ, ಕಲರ್ಸ್ ಕನ್ನಡದಲ್ಲಿ 7 ಪಾಯಿಂಟ್‌ ಗಳ ಆಸುಪಾಸಿನಲ್ಲಿ ವಿಹರಿಸುತ್ತಿರುವುದು ಮತ್ತು ಅದು ಹೀಗೆಯೇ ಮುಂದುವರಿದರೆ ಚಾನಲ್ ಬಾಸುಗಳಿಗೆ ತಲೆನೋವಾಗುವುದು ಖಂಡಿತವೆಂಬಂತೆ ಗೋಚರಿಸುತ್ತಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Big boss Kannada ಗ್ರಾಫಿಕ್ಸ್ ತಂತ್ರಜ್ಞಾನ