ನೇಣು ಬಿಗಿದುಕೊಂಡ ನವ ವಿವಾಹಿತೆ


16-11-2017 1142

ಬೆಂಗಳೂರು: ರಾಜಾಜಿನಗದ ಡಿ ಬ್ಲಾಕ್‍ ನಲ್ಲಿ ನಿನ್ನೆ ರಾತ್ರಿ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಡಿ ಬ್ಲಾಕ್‍ನ 5ನೇ ಕ್ರಾಸ್‍ನ ಪದ್ಮಿನಿ (25)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ದಾವಣಗೆರೆ ಮೂಲದ ಪದ್ಮಿನಿಯನ್ನು 4 ತಿಂಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ನಂತರ ಕೆಲಸಕ್ಕೆ ಹೋಗದೆ ಚಂದ್ರಶೇಖರ್ ಕಾಲ ಕಳೆಯುತ್ತಿದ್ದು, ಪದ್ಮಿನಿಯವರು ವಿವೊ ಮೊಬೈಲ್ ಅಂಗಡಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿದ್ದರು.

ನಿನ್ನೆ ಕೆಲಸ ಮುಗಿಸಿಕೊಂಡು ಬಂದಿದ್ದ ಪದ್ಮಿನಿ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಿನಿಯವರ ತಂದೆ ತಿಪ್ಪೇಸ್ವಾಮಿ ಅವರು ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಅಳಿಯನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಸುಬ್ರಮಣ್ಯ ನಗರ ಪೊಲೀಸರು ಚಂದ್ರಶೇಖರನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Crime women Sucide ನವ ವಿವಾಹಿತೆ ಅನುಮಾನಾಸ್ಪದ