ಬ್ರಾಂಡೆಡ್ ಹೆಸರಲ್ಲಿ ನಕಲಿ ಟೀ ಪುಡಿ !


16-11-2017 615

ಬೆಂಗಳೂರು: ಹಿಂದೂಸ್ಥಾನ್ ಲಿವರ್ ಕಂಪನಿಯ ಹೆಸರಿನಲ್ಲಿ ನಕಲಿ ಟೀಪುಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 20 ಸಾವಿರ ಮೌಲ್ಯದ ನಕಲಿ ಟೀ ಪುಡಿಯನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಾಜಿನಗರದ ರಾಮಚಂದ್ರರಾವ್ ಹಾಗೂ ದೀಪಕ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಹಿಂದೂಸ್ತಾನ್ ಕಂಪನಿಯ ತ್ರಿ ರೋಸಸ್ ಲೇಬಲ್ ಹಚ್ಚಿ ನಕಲಿ ಟೀ ಪುಡಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ಮೌಲ್ಯದ ನಕಲಿ ಟೀ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಕಮರ್ಷಿಯಲ್ ಸ್ಟ್ರೀಟ್‍ನ ಗ್ಯಾಲಕ್ಸ್ ಕಂಫರ್ಟ್ ಲಾಡ್ಜ್ ನಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ 7 ಮಂದಿಯನ್ನು ಇದೇ ಪೊಲೀಸರು ಬಂಧಿಸಿ, 45 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಾಜಿ ನಗರದ ಕುಮಾರ್ (46), ತೋಹಿಬ್ (29), ಸಜ್ಜಾದ್ (44), ಖಾಜ ಷರೀಫ್ (44), ಷರೀಫ್ (46), ಯುಸೂಫ್ (29), ರಾಜಾ (39) ಬಂಧಿತ ಆರೋಪಿಗಳಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Crime News Arrest ನಕಲಿ ಜೂಜಾಟ