ಹೆಣ್ಣು ಹೆಣ್ಣು…ಗಂಡು ಗಂಡು….!


15-11-2017 968

ಆಸ್ಟ್ರೇಲಿಯದ ಜನತೆ ಒಂದೇ ಲಿಂಗದ ಜನರ ಅಂದರೆ ಹೆಣ್ಣು ಹೆಣ್ಣನ್ನೇ ಮತ್ತು ಗಂಡು ಗಂಡನ್ನೇ ವಿವಾಹ ಆಗುವುದನ್ನು ಕಾನೂನು ಬದ್ಧಗೊಳಿಸುವುದರ ಪರ ಮತಹಾಕಿದ್ದಾರೆ. ಒಟ್ಟಾರೆ ಮತದಾರರಲ್ಲಿ ಶೇ. 61.6ರಷ್ಟು ಜನ ಇದರ ಪರವಾಗಿ ಮತ್ತು ಶೇ. 38.4 ರಷ್ಟು ಜನ ವಿರೋಧವಾಗಿ ಮತಹಾಕಿದ್ದಾರೆ.

ಒಂದೇ ಲಿಂಗದವರು ವಿವಾಹವಾಗುವುದಕ್ಕೆ ಜನಬೆಂಬಲ ದೊರೆಯುವುದು ಖಚಿತವಾಗುತ್ತಿದ್ದಂತೆ, ಆಸ್ಟ್ರೇಲಿಯದ ಹಲವು ಕಡೆ ಸಂಭ್ರಮಾಚರಣೆ ಮಾಡಲಾಗಿದೆ. ಒಂದೇ ಲಿಂಗದವರು ಮದುವೆ ಆಗುವುದರ ಪರ ಹೆಚ್ಚಿನ ಜನರು ಒಲವು ತೋರಿಸಿರುವ ಹಿನ್ನೆಲೆಯಲ್ಲಿ, ಇದಕ್ಕೆ ಕಾನೂನಿನಡಿ ಮಾನ್ಯತೆ ನೀಡುವ ಮಸೂದೆ ತರುವುದಾಗಿ ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಹೇಳಿದ್ದಾರೆ. ಈ ಮಸೂದೆ ಜಾರಿಗೆ ಬಂದರೆ, ಆಸ್ಟ್ರೇಲಿಯ, ಒಂದೇ ಲಿಂಗದ ಜನರು ಮದುವೆಯಾಗಲು ಅವಕಾಶ ನೀಡಿದ 26ನೇ ದೇಶವಾಗಲಿದೆ.

ಒಂದು ವೇಳೆ ಮುಂದೊಂದು ದಿನ ಭಾರತದಲ್ಲೂ, ನಿಮ್ಮ ಮಗಳು ಮತ್ತೊಬ್ಬಳು ಹೆಂಗಸನ್ನು ಕರೆದುಕೊಂಡು ಬಂದು ಇವಳೇ ನಿಮ್ಮ ಅಳಿಯ ಎಂದರೆ ಅಥವ ನಿಮ್ಮ ಮಗ, ಮತ್ತೊಬ್ಬ ಗಂಡಸನ್ನು ತೋರಿಸಿ ಇವನೇ ನಿಮ್ಮ ಸೊಸೆ ಅಂದುಬಿಟ್ಟರೆ ಹೇಗಿರುತ್ತದೆ ಅನ್ನುವುದನ್ನು, ಮದುವೆ ವಯಸ್ಸಿಗೆ ಬಂದ ಮಕ್ಕಳಿರುವ ಎಲ್ಲಾ ತಂದೆ ತಾಯಿಗಳು ಊಹೆ ಮಾಡಿಕೊಳ್ಳಬಹುದು.


ಒಂದು ಕಮೆಂಟನ್ನು ಬಿಡಿ