‘ನನ್ನ ಮಾತು ನಂಬಿ, ಧರಣಿ ಕೈಬಿಡಿ’


15-11-2017 893

ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಮಥುರಾ ಕಾಲೋನಿಯಲ್ಲಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮನೆ ಮುಂದೆ, ಕಳಸಾ ಬಂಡೂರಿ‌ ಹೋರಾಟಗಾರರು ಪ್ರತಿಭಟನೆ ನೆಡೆಸುತ್ತಿದ್ದು, ಇಂದು ಪ್ರತಿಭಟನಾನಿರತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ಮಾಡಿದ್ದಾರೆ.

ಈ ವೇಳೆ ಕಳಸಾ ಬಂಡೂರಿ ಹೋರಾಟಗಾರರ ಮನವೊಲಿಸಿದ್ದು, ಬಿ.ಎಸ್.ಯಡಿಯೂರಪ್ಪ ಮನವಿಗೆ ಮೇರೆಗೆ ರೈತರು ಧರಣಿ ಹಿಂದಕ್ಕೆ ಪಡೆದಿದ್ದಾರೆ. ಒಂದು ತಿಂಗಳಲ್ಲಿ ‌ವಿವಾದ ಇತ್ಯರ್ಥಪಡಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. 7.56 ಟಿಎಂಸಿ ನೀರು ಬಿಡುಗಡೆ ಮಾಡಿಸಿ, ನಿಮ್ಮ ಜೊತೆ ಮಾತನಾಡುವೆ, ನನ್ನ ಮಾತು ನಂಬಿ, ಧರಣಿ ಇಲ್ಲಿಗೆ‌ ಕೈಬಿಡಿ ಎಂದು ಮನವಿ ಮಾಡಿದ್ದು, ರೈತರು ಧರಣಿ ಹಿಂದಕ್ಕೆ ಪಡೆದರು.


ಒಂದು ಕಮೆಂಟನ್ನು ಬಿಡಿ