‘ಪ್ರತಿಪಕ್ಷಗಳ ಟೀಕೆಗೆ ಎದಿರೇಟು ಕೊಡಬೇಕು’


15-11-2017 545

ಬೆಳಗಾವಿ: ಬೆಳಗಾವಿಗೆ ಬಂದಿರುವ ಶಾಸಕರು ಸದನಕ್ಕೆ ಬರಲು ಏನು ತೊಂದರೆ. ಮಂತ್ರಿಗಳೂ ಕಲಾಪದಲ್ಲಿ ಹಾಜರಿರಬೇಕು ಎಂಬ ಸೂಚನೆಯನ್ನು ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿಪಕ್ಷಗಳ ಟೀಕೆಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಸರ್ಕಾರದ ಕೊನೆಯ ಅಧಿವೇಶನ, ಪ್ರತಿ ಪಕ್ಷಗಳಿಗೆ ಯಾವುದೇ ವಿಷಯ ಇಲ್ಲ, ರಾಜಕೀಯ ಕಾರಣಗಳಿಗಾಗಿ ಕೆಲ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು.

ಇನ್ನು ಜಾರ್ಜ್ ಅವರ ವಿಷಯದಲ್ಲೂ ಪ್ರತಿಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಹಳೆಯ ವಿಚಾರಗಳನ್ನೇ ಬಿಜೆಪಿಯವರು ಕೆದಕುತ್ತಿದ್ದಾರೆ. ಶಾಸಕರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಯಾವುದೇ ವಿಷಯ ಇರಲಿ, ಪ್ರತಿಪಕ್ಷಗಳ ಟೀಕೆಗೆ ಎದಿರೇಟು ಕೊಡಬೇಕು ಎಂದು ಸೂಚಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Congress Legislative party ಶಾಸಕಾಂಗ ಪಕ್ಷ ಕಲಾಪ