ಚಿಕಿತ್ಸೆ ಇಲ್ಲದೆ 3 ತಿಂಗಳ ಮಗು ಸಾವು !


14-11-2017 841

ಹಾಸನ: ಖಾಸಗಿ ವೈದ್ಯರ ಮುಷ್ಕರಕ್ಕೆ ಹಾಸನದಲ್ಲಿ ಮಗುವೊಂದು ಸಾವನ್ನಪ್ಪಿದೆ. ಸಿದ್ದಯ್ಯನಗರದ ನದೀಮ್ ಪಾಷಾ-ಫರ್ಹಾ ದಂಪತಿಯ 3 ತಿಂಗಳ ಗಂಡು ಮಗು ಮೃತಪಟ್ಟಿದೆ. ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ನಿನ್ನೆ ಇಡೀ ಚಿಕಿತ್ಸೆಗಾಗಿ ದಂಪತಿ ಪ್ರಯತ್ನಿಸಿದ್ದಾರೆ. ಆದರೆ ಮುಷ್ಕರದಿಂದ ಯಾವೊಂದು ಆಸ್ಪತ್ರೆಯು ಹೊರ ರೋಗಿಗಳ ವಿಭಾಗ ತೆರೆಯದಿದ್ದು, ಚಿಕಿತ್ಸೆಗಾಗಿ ಅಲೆದಾಡಿದ್ದಾರೆ. ಇನ್ನು ಚಿಕಿತ್ಸೆ ದೊರೆಯದ ಕಾರಣ, ಇಂದು ಹಾಸನಕ್ಕೆ ಕರೆತರುವ ಮಾರ್ಗ ಮಧ್ಯೆ 3 ತಿಂಗಳ ಕಂದಮ್ಮ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Hassan Strike ಚಿಕಿತ್ಸೆ ಆಕ್ರಂದನ