ಖೈದಿ ಸಾವು..


13-11-2017 919

ಬಳ್ಳಾರಿ: ವಿಚಾರಣಾಧೀನ ಖೈದಿಯೊಬ್ಬರು ಸಾವನ್ನಪ್ಪಿರುವ ಘಟನೆಯು, ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ನಿಸಾರ್ (35) ಮೃತ ಖೈದಿ. ಎದೆನೋವು ಎಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಲು ಹೊರಡುವ ದಾರಿಯಲ್ಲಿಯೇ  ಖೈದಿ ಸಾವನ್ನಪ್ಪಿದ್ದಾನೆ. ಅಕ್ರಮ ಮರಳು ದಂಧೆ ಆರೋಪದಡಿ ನಿಸಾರ್ ಕಳೆದ ನಾಲ್ಕು ದಿನಗಳ ಹಿಂದೆ ವಿಶೇಷ ಪೊಲೀಸ್ ದಳದಿಂದ ಬಂಧಿಸಲ್ಪಟ್ಟಿದ್ದ. ಇದೇ ವೇಳೆ ಅಮಾಯಕನನ್ನು ಬಂಧಿಸಿ ಪೋಲೀಸರು ಸಾಯಿಸಿದ್ದಾರೆ ಎಂದು, ಮೃತ ಸಂಬಂಧಿಕರು ಆರೋಪಿಸಿ, ಮರಣೋತ್ತರ ಪರೀಕ್ಷೆಗೆ ಅಡ್ಡಿ ಪಡಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ, ಮೃತನ ಸಂಬಂಧಿಗಳು ವಿಮ್ಸ್ ಆಸ್ಪತ್ರೆಗೆ ತಂಡೋಪವಾಗಿ ಜಮಾಯಿಸುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ದೌಡಾಯಿಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bellary Central jail ವಿಚಾರಣಾಧೀನ ಖೈದಿ