ಬಸವರಾಜ ಹೊರಟ್ಟಿಗೆ ಸ್ವಾಮೀಜಿ ಸವಾಲ್


08-11-2017 1119

ಹುಬ್ಬಳ್ಳಿ: ನಾನು ಯಾವಾಗ ಮತ್ತು ಎಲ್ಲಿ ಬಡ್ಡಿ ವ್ಯವಹಾರ ಮಾಡಿದ್ದೇನೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ದಾಖಲೆ ಸಮೇತ ಸಾಬೀತು ಪಡಿಸಬೇಕು ಎಂದು, ಬಾಳೇ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ. ಸ್ವಾಮೀಜಿ ವಿರುದ್ಧ ಹೊರಟ್ಟಿ ಅವರು ನೀಡಿರುವ ಹೇಳಿಕೆ ಖಂಡಿಸಿದ ಸ್ವಾಮೀಜಿ, ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಹೊರಟ್ಟಿ ನನ್ನ ವಿಚಾರವಾಗಿ ಅಲ್ಲಸಲ್ಲದ ಆರೋಪ ಮಾಡಿದ್ದು ಎಷ್ಟು ಸರಿ, ನಾನು ಬಡ್ಡಿ ವ್ಯವಹಾರ ಮಾಡ್ತೇನಿ ಅಂತ ಅವರು ಹೇಳಿಕೆ ನೀಡಿದ್ದು, ಅದನ್ನು ಕೂಡಲೇ ಸಾಬೀತು ಪಡಿಸಲಿ ಎಂದು ಒತ್ತಾಯಿಸಿದರು. ಮೂರುಸಾವಿರ ಮಠವನ್ನು ಕಬಳಿಸಲು ಹೊರಟ್ಟಿಯವರು ಏನು ಮಾಡಿದ್ದಾರೆ ಅಂತ ನನಗೆ ಗೊತ್ತು. ಆದರೆ, ತುಂಬಿದ ಸಭೆಯಲ್ಲಿ ನಾನೇ ಮಠ ಹೊಡೆಯಲು ಹುನ್ನಾರ ನಡೆಸಿದ್ದೇನೆ ಎಂದು ಅವರು ಆರೋಪಿಸಿದ್ದಾರೆ ಎಂದರು.


ಒಂದು ಕಮೆಂಟನ್ನು ಬಿಡಿ