ಕತ್ತಲೆ ಭಾಗ್ಯ..!


08-11-2017 991

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್​ ಪ್ರಾರಂಭವಾಗಲಿದ್ದು, ಕತ್ತಲೆ ಭಾಗ್ಯ ನೀಡಲು ಸರ್ಕಾರ ಸಜ್ಜಾಗಿದೆ. ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಕಾರಣ, ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಉಂಟಾಗಿರುವ ವಿದ್ಯುತ್ ಕೊರತೆ ನೀಗಿಸಲು ಐಇಎಕ್ಸ್​​​ನಲ್ಲಿ ವಿದ್ಯುತ್ ಖರೀದಿಸಿ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೆ ಲೋಡ್ ಶೆಡ್ಡಿಂಗ್ ನಿಂದ ಜನರಿಗೆ ತೊಂದರೆಯಾಗುತ್ತಿದ್ದು, ಇನ್ನು ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ಜನರಿಗೆ ಹೆಚ್ಚಿನ ತೊಂದರೆ ತಪ್ಪಿದ್ದಲ್ಲ.  


ಒಂದು ಕಮೆಂಟನ್ನು ಬಿಡಿ