‘ನಾಳೆ ರಾಷ್ಟ್ರಾದ್ಯಂತ ಬ್ಲಾಕ್ ಡೇ’


07-11-2017 1373

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರು ಪುನರ್ಜನ್ಮ ನೀಡಿದ ಜಿಲ್ಲೆಯಾಗಿದ್ದು, 2018ರ ಚುನಾವಣೆಯಲ್ಲಿ ಮರಳಿ ಕಾಂಗ್ರೆಸ್ ಭದ್ರಕೋಟೆ ಆಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಳೆದ ಮೂರು ವರ್ಷದ ಅವಧಿಯಲ್ಲಿ ವಾಸ್ತವವಾಗಿ ಜನತೆಗೆ ಏನು ಕೊಡುಗೆ ನೀಡಿದೆ..? ಎಂದು ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಅವರು, ನೋಟ್ ಬ್ಯಾನ್, ಜಿಎಸ್‍ಟಿ ಜಾರಿ ಮಾಡಿ, ಸಿಬಿಐ ಸೇರಿದಂತೆ ಆದಾಯ ತೆರಿಗೆ, ಇನ್ನಿತರೆ ಸಂಸ್ಥೆಗಳಿಂದ ಬಿಜೆಪಿಯೇತರರಿಗೆ ತೊಂದರೆ ನೀಡಿದ್ದು ಮತ್ತು ನೀಡುತ್ತಿರುವುದೇ ಅವರ ಕೊಡುಗೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಚುನಾವಣೆಯಲ್ಲಿ ನೀಡಿದ ಯಾವ ಆಶ್ವಾಸನೆಯನ್ನೂ ಬಿಜೆಪಿ ಈಡೇರಿಸಿಲ್ಲ. ಈಗ ಪ್ಯಾರಡೈಸ್ ದಾಖಲೆಯಲ್ಲಿ ಕೇಂದ್ರ ಸಚಿವರ, ಸಂಸದರ ಹೆಸರು ಕೂಡ ಕೇಳಿ ಬರುತ್ತಿದೆ, ಮೋದಿ ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ, ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಪರಿಚಯಿಸಿದ್ದು, ದೇಶದಲ್ಲಿ ಮಾದರಿ ರಾಜ್ಯವಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಪ್ರಥಮವಾಗಿದೆ ಎಂದ ಅವರು, ನವೆಂಬರ್ 8ರಂದು ನೋಟು ರದ್ದತಿ ಮಾಡಿದ ದಿನವನ್ನು 'ಬ್ಲಾಕ್ ಡೇ' ಎಂಬುದಾಗಿ ರಾಷ್ಟ್ರಾದ್ಯಂತ ಆಚರಣೆ ಮಾಡಲಾಗುವುದು ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಎಐಸಿಸಿ ವೇಣುಗೋಪಾಲ್