ಕುಲಕರ್ಣಿ ವಿರುದ್ಧ ಹಿರೇಮಠ ಕೆಂಡಾಮಂಡಲ !


07-11-2017 822

ಧಾರವಾಡ: ಅಕ್ರಮ ‌ಗಣಿಗಾರಿಕೆ ಸಂಬಂಧ ಲೋಕಾಯುಕ್ತರು ನೀಡಿರುವ ವರದಿಯಲ್ಲಿನ ಶಿಫಾರಸು ಅನುಷ್ಠಾನಗೊಳಿಸುವಲ್ಲಿ ಸಚಿವ ಸಂಪುಟ ಸಮಿತಿ ವಿಫಲವಾಗಿದೆ ಎಂದು, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ‌ಎಸ್.ಆರ್.ಹಿರೇಮಠ ಅವರು ದೂರಿದ್ದಾರೆ. ಅಲ್ಲದೇ ಗಣಿ ಹಾಗೂ ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿಯಂತವರನ್ನು ಶೀಘ್ರವಾಗಿ ಸಂಪುಟದಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಧಾರವಾಡದಲ್ಲಿಂದು ಮಾತನಾಡಿದ ಅವರು, ಜನರ ಹಿತದ ಕಡೆಗೆ, ನಮ್ಮ ಸಂಪನ್ಮೂಲ‌ ಉಳಿಸುವ ಕಡೆಗೆ ವಿನಯ್ ಕುಲಕರ್ಣಿ ಲಕ್ಷ್ಯ ನೀಡುತ್ತಿಲ್ಲ, ಇಂತಹ ಒಬ್ಬ ವ್ಯಕ್ತಿ ಸಚಿವ ಆಗೋದು ಹೋಗಲಿ, ಗಣಿ ಖಾತೆಯಂತಹ ಗುರುತರ ಜವಾಬ್ದಾರಿಯುಳ್ಳ‌ ಖಾತೆಯಲ್ಲಿ‌ ಇರಬಾರದು ಎಂದ ಹಿರೇಮಠ, ಮೊದಲು ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ