ಮಧ್ಯರಾತ್ರಿ ಆಸ್ಪತ್ರೆಗೆ ಬಂದ ಯು.ಟಿ.ಖಾದರ್..


06-11-2017 1268

ಮಂಗಳೂರು: ರೋಗಿಯೊಬ್ಬರ ಮನವಿ ಆಲಿಸಿದ ಸಚಿವ ಯು.ಟಿ ಖಾದರ್ ತಡರಾತ್ರಿಯೇ ಆಸ್ಪತ್ರೆಗೆ ತೆರಳಿ ರೋಗಿಯನ್ನು ಭೇಟಿಯಾಗಿ ಅವರಿಗೆ ಧೈರ್ಯ ಹೇಳಿದ ಘಟನೆ ನಡೆದಿದೆ.

ಮಂಗಳೂರಿನ ಹೊರಹೊಲಯದ ಮುಡಿಪು ನಿವಾಸಿಯ ರೋಗಿಯನ್ನು ಸಚಿವರು ಭೇಟಿಯಾಗಿದ್ದಾರೆ. ರೋಗಿ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ. ಈತ ರಜೆಗೆಂದು ಮನೆಗೆ ಬಂದಿದ್ದ ವೇಳೆ ಅವರಿಗೆ ವಿಷಕಾರಿ ಹಾವು ಕಚ್ಚಿದೆ. ತಕ್ಷಣಕ್ಕೆ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕಚ್ಚಿದ ಹಾವು ವಿಷಕಾರಿಯಾದ ಕಾರಣ ವೈದ್ಯರು 20 ಇಂಜೆಕ್ಷನ್ ನೀಡಬೇಕು. ಇದಾದ ಮೇಲೆ ಜೀವ ಉಳಿಯುವ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಇದರಿಂದ ಕಂಗಾಲಾದ ರೋಗಿ ಸಂಬಂಧಿಕರು ಸಚಿವ ಯು.ಟಿ.ಖಾದರ್’ಗೆ ಕರೆ ಮಾಡಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ರೋಗಿಯನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಕುಟುಂಬಸ್ಥರಿಗೂ ಧೈರ್ಯ ತುಂಬಿ, ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದರು.


ಒಂದು ಕಮೆಂಟನ್ನು ಬಿಡಿ