‘ಮಾಜಿ ಕುಲಪತಿ ರಂಗಪ್ಪ 420’- ಮಧುಸೂದನ್


06-11-2017 956

ಮೈಸೂರು: ಸಚಿವ ಬಸವರಾಜ್ ರಾಯರೆಡ್ಡಿ ಒಬ್ಬ ನಾಲಾಯಕ್, ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೈಸೂರಿನಲ್ಲಿಂದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಒಯು ಗೆ ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ರಾಯರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಚಿವರು ಕೇವಲ ಪ್ರೋಫೆಸರ್ ಹಾಗೂ ಕುಲಪತಿಗಳ ಮೇಲೆ ಸುಮ್ಮನೆ ಕಿಡಿಕಾರುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡಲಿಲ್ಲ ಎಂದರು.

ಬಸವರಾಜ ರಾಯರೆಡ್ಡಿಯರನ್ನು ನೋಡಿದರೆ ಕನಿಕರ ಹುಟ್ಟುತ್ತದೆ. ಅವರು ಕೇವಲ ನಾಲಿಗೆ ತೀಟೆ ತೀರಿಸಿಕೊಳ್ಳಲು ಮಾತನಾಡುತ್ತಾರೆ ಎಂದು ಹಂಗಿಸಿದರು. ಕರ್ನಾಟಕ ಮುಕ್ತ ವಿವಿಯ ಮಾಜಿ ಕುಲಪತಿ ರಂಗಪ್ಪ ನಂಬರ್ ಒನ್ 420, ಅಲ್ಲದೇ ಈ ಹಿಂದಿನ ಮಾಜಿ ಕುಲಪತಿ ಕೃಷ್ಣನ್ ಕೂಡ ನಂಬರ್ ಒನ್ 420. ಇಬ್ಬರೂ ಸೇರಿ 840 ಎಂದು ವ್ಯಂಗ್ಯವಾಡಿದ ಅವರು, ಕೆಎಸ್ಒಯು ಹಗರಣದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಕೆಎಸ್ಒಯು ಗೋ.ಮಧುಸೂದನ್