ಸರಗಳ್ಳರಿಗೆ ಧರ್ಮದೇಟು.. 


06-11-2017 1336

ಬೆಂಗಳೂರು: ನಗರದ ಹೊರವಲಯದ ತ್ಯಾಮಗೊಂಡ್ಲುವಿನ ತೋಟನಹಳ್ಳಿ ಬಳಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ನಡೆದಿದೆ.

ನೆಲಮಂಗಲದ ಹೇಮಂತ್ ಹಾಗೂ ವಿನಯ್ ಎಂದು ಬಂಧಿತ ಆರೋಪಿಗಳನ್ನು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈ ಇಬ್ಬರು ಕಳ್ಳರು, ತೋಟನಹಳ್ಳಿ ಬಳಿ ಮಂಜುಳಾ ಎಂಬುವರಿಗೆ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸರ ಗಟ್ಟಿಯಾಗಿ ಹಿಡಿದುಕೊಂಡ ಮಂಜುಳಾ ರಕ್ಷಣೆಗಾಗಿ ಕೂಗಿಕೊಂಡಿದ್ದು, ಹತ್ತಿರದಲ್ಲಿದ್ದ ಸ್ಥಳೀಯರು ಓಡಿ ಬಂದು ಕಳ್ಳರನ್ನು ಬೆನ್ನಟ್ಟಿ ಧರ್ಮದೇಟು ಕೊಟ್ಟು ತ್ಯಾಮಗೊಂಡ್ಲು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಳ್ಳರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ