ಪಾಲಿಕೆ ಆಯುಕ್ತರ ಮೇಲೆ ಕೊಲೆ ಯತ್ನ ದೂರು..


06-11-2017 818

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.‌ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ವಕೀಲ ಸಂತೋಷ್ ನರಗುಂದ, ಪ್ರಕಾಶ್ ವಾಲಿ ಎಂಬುವವರು ಆಯುಕ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

ಈಜುಕೊಳ ಸಮಸ್ಯೆ ಬಗೆಹರಿಸುವಂತೆ ಮನವಿ ಕೊಡಲು ಆಯುಕ್ತರ ಮನೆ ಬಳಿ ದೂರುದಾರರಾದ ಸಂತೋಷ್, ಪ್ರಕಾಶ ಸೇರಿದಂತೆ ಸಾರ್ವಜನಿಕರು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಲಗಿದ್ದ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅಕ್ರಮವಾಗಿ ಮನೆಗೆ ಬಂದು ನೆಮ್ಮದಿ ಹಾಳು ಮಾಡಿದ್ದಾರೆಂದು ಮನವಿ ಕೊಡಲು ಬಂದವರ ವಿರುದ್ಧವೇ ದೂರು ದಾಖಲಿಸಿದ್ದರು. ಇದ್ದಕ್ಕೆ ಸಂತೋಷ್ ಹಾಗೂ ಪ್ರಕಾಶ್ ಆಯುಕ್ತರು ನಿಂದಿಸಿ, ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ಪ್ರತಿ ದೂರು ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಹುಬ್ಬಳ್ಳಿ ಉಪನಗರ