ಸಿದ್ದರಾಮಯ್ಯ ಪುತ್ರ ನಿರಾಳ..


02-11-2017 955

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಕ್ರಮವಾಗಿ ಡಯೋಗ್ನೋಸ್ಟಿಕ್ ಸರ್ವಿಸ್ಸ್ ಘಟಕ ಆರಂಭಕ್ಕೆ ಟೆಂಡರ್ ಪಡೆದ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಖುಲಾಸೆ ಮಾಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ನಿರಾಳವಾಗಿದ್ದಾರೆ.

ಆಸ್ಪತ್ರೆಯಲ್ಲಿ ಅಕ್ರಮವಾಗಿ ಡಯೋಗ್ನೋಸ್ಟಿಕ್ ಸರ್ವಿಸ್ಸ್ ಘಟಕ ಆರಂಭಕ್ಕೆ ಅಕ್ರಮವಾಗಿ ಟೆಂಡರ್ ಪಡೆಯಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ನೀಡಿದ್ದ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಎಸಿಬಿ ಅಧಿಕಾರಿಗಳು ಪ್ರಕರಣದ ವಿಚಾರಣೆಯನ್ನು ಕೈಬಿಟ್ಟಿದ್ದಾರೆ.

ಡಾ.ಯತೀಂದ್ರ ನೇತೃತ್ವದ ಮ್ಯಾಟ್ರಿಕ್ ಇಮೇಜಿಂಗ್ ಕಂಪನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯಡಿ ಡಯೋಗ್ನೋಸ್ಟಿಕ್ ಸರ್ವಿಸ್ ಘಟಕ ಆರಂಭಕ್ಕೆ ಟೆಂಡರನ್ನು ನಿಯಮಬಾಹಿರವಾಗಿ ನೀಡಲಾಗಿದೆ ಎಂದು ಭಾಸ್ಕರನ್ ಅವರು ಎಸಿಬಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ದೂರು ಅರ್ಜಿಯ ವಿಚಾರಣೆ ನಡೆಸಿದ ಎಸಿಬಿ, ದೂರಿನಲ್ಲಿ ಮಾಡಿರುವ ಆಪಾದನೆಗಳು ಸಾಬೀತಾಗಿಲ್ಲ. ಅದರಿಂದ ಅರ್ಜಿಯ ವಿಚಾರಣೆಯನ್ನು ಎಸಿಬಿ ಮುಕ್ತಗೊಳಿಸಿದೆ. ತಮ್ಮ ಹೇಳಿಕೆಯನ್ನು ಪಡೆಯದೆ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿರುವ ಎಸಿಬಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಭಾಸ್ಕರನ್, ಹೈಕೋರ್ಟ್‍ನಲ್ಲಿ ಕಾನೂನು ಸಮರ ಆರಂಭಿಸುವುದಾಗಿ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ