‘ಎಫ್‍.ಐ.ಆರ್ ದಾಖಲಾದೊಡನೆ ತಪ್ಪಿತಸ್ಥರಲ್ಲ’


27-10-2017 1295

ಎಫ್‍.ಐ.ಆರ್ ದಾಖಲಾದೊಡನೆ ತಪ್ಪಿತಸ್ಥರಲ್ಲ ಹೀಗಾಗಿ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರೆ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಇನ್ನೊಂದೆಡೆ ಜಾರ್ಜ್ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಾಗಿದ್ದರಿಂದ ಜಾರ್ಜ್ ಆಗ ರಾಜಿನಾಮೆ ಕೊಟ್ಟಿದ್ದರು. ಸಿಬಿಐ ಎಫ್.ಐ.ಆರ್. ದಾಖಲಿಸಿರುವ ಈಗ ಅವರ ಖಾತೆ ಬೇರೆಯಿರುವುದರಿಂದ ರಾಜೀನಾಮೆ ಅಗತ್ಯವಿಲ್ಲ. ಬಿಜೆಪಿ ಇದರಲ್ಲಿರಾಜಕೀಯ ಮಾಡಬಾರದು ಎಂಬುದು, ಸಿದ್ದು ವಾದವಾದರೆ, ತಕ್ಷಣವೇ ರಾಜೀನಾಮೆ ಬೇಡ, ತನಿಖೆಯ ಫಲಿತಾಂಶ ಬರಲಿ ಎಂದು ಎಚ್‍ಡಿಕೆ ಹೇಳಿದ್ದಾರೆ. ಬಿಜೆಪಿ ಮಾತ್ರ ರಾಜೀನಾಮೆ ಕೊಡದಿದ್ದರೆ ಜಾರ್ಜ್ ಹೋದಲ್ಲೆಲ್ಲ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಎಫ್‍.ಐ.ಆರ್ ರಾಜೀನಾಮೆ