ಗಾಂಜಾ ಮಾರುತ್ತಿದ್ದ ರೌಡಿಗಳು ಅರೆಸ್ಟ್ !


26-10-2017 1060

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಗಳು, ಉಗಾಂಡದ ವಿದೇಶಿ ಪ್ರಜೆ ಸೇರಿ ಮೂವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಗಿಲು ಲೇಔಟ್‍ ನ ಮುಜಾಮಿಲ್ ಪಾಷ ಅಲಿಯಾಸ್ ಮುಜ್ಜು (27), ಬಾಬು (27) ಹಾಗೂ ಉಗಾಂಡಾದ ಮೊಗೊಲಾ ಜಾನ್ (25) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಾದ ಮುಜಾಮಿಲ್ ಹಾಗೂ ಬಾಬುನಿಂದ 400 ಗ್ರಾಂ ತೂಕದ ಗಾಂಜಾವನ್ನು ಯಲಹಂಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರು ಯಲಹಂಕ ರೈಲ್ವೆನಿಲ್ದಾಣದ ಗಣೇಶ ದೇವಾಲಯದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಇನ್ಸ್ ಪೆಕ್ಟರ್ ಮಂಜೇಗೌಡ ಮತ್ತವರ ಸಿಬ್ಬಂದಿಗೆ ಸಿಕ್ಕಿ ಬಿದಿದ್ದಾರೆ. ದೊಂಬಿ,ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರಿಬ್ಬರನ್ನು ಯಲಹಂಕ ಠಾಣೆಯ ರೌಡಿ ಪಟ್ಟಿಗೆ ಸೇರಿಸಿ ಕ್ರಮಕೈಗೊಳ್ಳಲಾಗಿತ್ತಾದರೂ, ಆರೋಪಿಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಯಲಹಂಕ ಉಪನಗರ ಪೊಲೀಸರು ಕಟ್ಟಿಗೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಉಗಾಂಡಾ ಮೂಲದ ಮೊಗೊಲಾ ಜಾನ್‍ನಿಂದ 300 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಬೇರೆಡೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದನು. ಯಲಹಂಕ ಉಪನಗರದ ಬಿಬಿಎಂಪಿ ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಯು ವಿದ್ಯಾರ್ಥಿ ವೀಸಾದಡಿ ಬಂದಿರುವುದು ತಿಳಿದು ಬಂದಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಉಗಾಂಡ ವಿದ್ಯಾರ್ಥಿ ವೀಸಾ