ಚಿರತೆ ಬಂತು ಚಿರತೆ..


26-10-2017 1386

ಮೈಸೂರಿನ ಮೃಗಾಲಯಕ್ಕೆ ಬೆಳ್ಳಂಬೆಳಗ್ಗೆಯೇ ಚಿರತೆಯೊಂದು ಹೊಕ್ಕಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿವೆ. ಆನೆಗಳು ಕಳೆದ ಕೆಲ ವರ್ಷಗಳ ಹಿಂದೆ ನಗರದೊಳಕ್ಕೇ ಬಂದು ಅನಾಹುತವೆಬ್ಬಿಸಿದ್ದವು, ಚಿರತೆಗಳಂತು ಆಗಿಂದಾಗ್ಗೆ ನಗರದ ಹೊರಭಾಗದಲ್ಲಿ, ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು, ಕಳೆದ ತಿಂಗಳು ಕುಪ್ಪಣ್ಣ ಪಾರ್ಕಲ್ಲಿ ಮೊಸಳೆಯೂ ಬಂದಿತ್ತು.

ಇವುಗಳೆಲ್ಲದರ ಹಿನ್ನೆಲೆಯಿರುವ ಮೈಸೂರು ನಗರದ ಜನತೆ ಕಾಡುಪ್ರಾಣಿಗಳ ಕುರಿತು ಭಯವಿಟ್ಟುಕೊಂಡಿರುವುದೂ ಇದೆ. ಇದಕ್ಕೆ ಹೆಚ್ಚುವರಿಯಾಗಿ ಇಂದು ಬೆಳಗ್ಗೆ ಮೃಗಾಲಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದು ಹೊರಗಿನಿಂದ ಬಂದಿದ್ದಾ ಅಥವಾ ಮೃಗಾಯಲದ ಬೋನಿನಿಂದ ತಪ್ಪಿಸಿಕೊಂಡಿದ್ದಾ ಎಂಬುದಿನ್ನೂ ಖಚಿತವಾಗಿಲ್ಲ.

ಕೆಲವು ಪ್ರವಾಸಿಗಳು ಮೃಗಾಲಯದ ಒಳಗಿದ್ದು ಅವರನ್ನು ಹೊರಕ್ಕೆ ಬಿಡುತ್ತಿಲ್ಲ. ಜೊತೆಗೆ ಬೇರೆ ಸಂದರ್ಶಕರಿಗೆ ಪ್ರವೇಶಕ್ಕೆ ವಕಾಶವಿಲ್ಲವಾದ್ದರಿಂದ, ಪ್ರವಾಸಿಗರೆಲ್ಲ ಹೊರಗೆಯೇ ನಿಂತಿದ್ದಾರೆ. ಒಳಗಿರುವ ಚಿರತೆಯನ್ನ ಹೊರಕ್ಕೆ ಬರದಂತೆ, ಬಂಧಿಸುವುದಕ್ಕಾಗಿ ಪ್ರಯತ್ನಗಳು ಸಾಗಿದ್ದು, ಇದೇನಾದರೂ ಹೊರಕ್ಕೆ ನುಗ್ಗಿದರೆ ಭಾರೀ ಅನಾಹುತಗಳು ಸಂಭವಿಸುವಂಥದ್ದನ್ನು ತಳ್ಳಿಹಾಕುವಂತಿಲ್ಲ.

ವರದಿ: ಜಿ.ಆರ್.ಸತ್ಯಲಿಂಗರಾಜು


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಮೃಗಾಲಯ ಪ್ರವಾಸಿಗಳು