‘ದುಂದುವೆಚ್ಚದಲ್ಲಿ ನಮಗೆ ಪಾಲು ಬೇಡ’-ಎಚ್ಡಿಕೆ


25-10-2017 816

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದ ಆಚರಣೆಗೆ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಈ ದುಂದುವೆಚ್ಚದಲ್ಲಿ ನಮಗೆ ಯಾವುದೇ ಪಾಲು ಬೇಡ ಮತ್ತು ಪಕ್ಷದ ಶಾಸಕರು ಅಲ್ಲಿ ಒಂದು ಗುಟುಕು ನೀರನ್ನೂ ಕುಡಿಯುವುದು ಬೇಡ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ರಾಷ್ಟ್ರಪತಿ ಅವರ ಭಾಷಣ ಮುಗಿಯುತ್ತಿದ್ದಂತೆ ವಿಧಾನಸೌಧದಿಂದ ತೆರಳಿದರು.

ರೈತರು ಹಾಗೂ ಜನರು ಮಳೆ, ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವಾಗ ನಾವು ದುಂದುವೆಚ್ಚಕ್ಕೆ ಬೆಂಬಲ ವ್ಯಕ್ತಪಡಿಸಬಾರದು. ವಜ್ರಮಹೋತ್ಸವದ ಹೆಸರಿನಲ್ಲಿ ಮಾಡುತ್ತಿರುವ ದುಂದುವೆಚ್ಚದಲ್ಲಿ ನಮಗೆ ಪಾಲು ಬೇಡ ಎಂದು ಶಾಸಕರಿಗೆ ಸಲಹೆ ನೀಡಿದ್ದರು. ಜಂಟಿ ಅಧಿವೇಶನ ಹೊರತುಪಡಿಸಿದರೆ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಹಾಗೂ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ವಿಶೇಷ ಔತಣಕೂಟದಲ್ಲೂ ಭಾಗವಹಿಸದಂತೆ ನಿರ್ದೇಶನ ನೀಡಿದ್ದರು.


ಒಂದು ಕಮೆಂಟನ್ನು ಬಿಡಿ