5 ದಿನ ಕಿಸಾನ್ ಸಭಾ ಪ್ರತಿಭಟನೆ !


24-10-2017 1362

ಕಲಬುರಗಿ: ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್)ಸಂಘಟನೆಯು ದೆಹಲಿಯಲ್ಲಿ ನವೆಂಬರ್ 1 ರಿಂದ 5 ರವರೆಗೆ ಐದು ದಿನಗಳ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುವ ಧರಣಿಯಲ್ಲಿ ಅಖಿಲ ಭಾರತ ಕಿಸಾನ ಸಭಾದ ಪ್ರಮುಖರಾದ ಪ್ರಮೋದ ಪಾಂಡಾ, ಅತುಲಕುಮಾರ ಅಂಜಾನ್ ಅವರು ನೇತೃತ್ವ ವಹಿಸಲಿದ್ದು, ರಾಜ್ಯದಿಂದ ಸುಮಾರು 60 ಜನ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಕಿಸಾನ ಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಮೌಲಾಮುಲ್ಲಾ ಮತ್ತು ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಅವರು ತಿಳಿಸಿದರು.

ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು, ಕೃಷಿಗೆ ಹಾಕುವ ಬಂಡವಾಳಕ್ಕೆ ಶೇ 50 ಲಾಭಾಂಶ ಬರುವ ಹಾಗೆ ಬೆಲೆ ನಿಗದಿ ಪಡಿಸಬೇಕು. 60 ವರ್ಷ ಪೂರೈಸಿದ ಹಿರಿಯ ರೈತರಿಗೆ 5 ಸಾವಿರ ರೂಪಾಯಿ ನಿವೃತ್ತಿ ವೇತನ ನೀಡಬೇಕು. ನೋಟು ಅಮಾನ್ಯೀಕರಣದ ನಂತರ ಉಂಟಾದ ನಷ್ಟಕ್ಕಾಗಿ ರೈತರಿಗೆ 2 ಲಕ್ಷ ರೂ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ 50 ಸಾವಿರ ರೂ ಪರಿಹಾರವನ್ನು ಕೇಂದ್ರ ಸರಕಾರ ವಿತರಿಸಬೇಕು ಎಂದು ಧರಣಿಯ ಮೂಲಕ ಆಗ್ರಹಿಸಲಾಗುವದು ಎಂದರು.


ಒಂದು ಕಮೆಂಟನ್ನು ಬಿಡಿ