ರಮ್ಯಾರಿಂದ ರಾಹುಲ್ ಗೆ ಮುಖಭಂಗ…


23-10-2017 1228

ಇತ್ತೀಚೆಗೆ ಫೇಸ್ ಬುಕ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ ದಿಢೀರ್ ಎಂದು ಹೆಚ್ಚಾಗಿತ್ತು. ದಿನದಿಂದ ದಿನಕ್ಕೆ ರಾಹುಲ್ ಗಾಂಧಿ ಅವರನ್ನು ಟ್ವಿಟ್ಟರ್ ನಲ್ಲಿ  ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿ, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನೂ ಹಿಂದಿಕ್ಕಿದ್ದಾರೆ ಅನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಓ… ಇನ್ನೇನು ಮೋದಿ ಅಲೆ ಸಂಪೂರ್ಣವಾಗಿ ನಿಂತುಹೋಗಿ ರಾಹುಲ್ ಗಾಂಧಿ ಅಲೆ ಆರಂಭವಾಗಿಬಿಡಬಹುದು ಎಂಬಷ್ಟರಮಟ್ಟಿಗೆ ಮಾತುಗಳು ಕೇಳಿ ಬರುತ್ತಿದ್ದವು. ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯ, ಇಂಥ ಒಂದು ಮಹತ್ವದ ಬದಲಾವಣೆಗೆ ಕಾರಣವಾಗಿದ್ದಾರೆ, ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಿಕೊಂಡ ನಂತರ ಅತ್ಯದ್ಭುತವಾಗಿ ಕೆಲಸಮಾಡುತ್ತಿದ್ದಾರೆ ಎಂಬ ಹೊಗಳಿಕೆಗಳೂ ಆರಂಭವಾಗಿದ್ದವು.

ಆದರೆ, ಇತ್ತೀಚಿನ ವರದಿಗಳ ಪ್ರಕಾರ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ, ಆಪಾಟಿ ಹಿಂಬಾಲಕರನ್ನು ಹೊಂದಿರುವ ವಿಚಾರವೇ ಸುಳ್ಳು, ಟ್ವಿಟ್ಟರ್ ನಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾದಂತೆ ಕಾಣುವುದಕ್ಕೆ, ನಕಲಿ ಟ್ವಿಟ್ಟರ್ ಖಾತೆಗಳೇ ಕಾರಣ ಎಂಬ ಮಾತುಗಳು ಕೇಳಿಬಂದಿವೆ.

ಟ್ವಿಟ್ಟರ್ ಬಾಟ್ ಎಂದು ಕರೆಯಲ್ಪಡುವ ಬಾಟ್ ಸಾಫ್ಟ್ ವೇರ್ ತಂತ್ರಗಾರಿಕೆ ಬಳಸಿಕೊಂಡು ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆಯಂತೆ. ಈ  ವಿಚಾರ ಬಯಲಾದ ಮೇಲೆ ರಾಹುಲ್ ಗಾಂಧಿ ಅವರು ಮುಖಭಂಗ ಅನುಭವಿಸಿದ್ದಾರೆ. ಈ ರೀತಿ ಆಗಲು, ರಮ್ಯ ಅಲಿಯಾಸ್ ದಿವ್ಯಸ್ಪಂದನ ಅವರೇ ಕಾರಣ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಟ್ವಿಟ್ಟರ್ ನಟಿ ರಮ್ಯ