ಆತಂಕ ಸೃಷ್ಟಿಸಿದ ಸರಣಿ ಕಳ್ಳತನ !


21-10-2017 753

ಮಂಡ್ಯ: ಮಂಡ್ಯದ ಕೆ.ಆರ್ ಪೇಟೆ ಮತ್ತು ಚನ್ನಪಟ್ಟಣದಲ್ಲಿ, ಕಳ್ಳರು ಅಂಗಡಿಗಳ ಬಾಗಿಲುಗಳನ್ನು ಮುರಿದು ಸರಣಿ ಕಳ್ಳತನ ನಡೆಸಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ, ಮೈಸೂರು ರಸ್ತೆಯಲ್ಲಿರುವ ತರುಣ್ ನ್ಯೂ ಫ್ಯಾಶನ್ಸ್ ಬಟ್ಟೆ ಅಂಗಡಿ ಮತ್ತು ಎಸ್.ಪಿ ಮೆಡಿಕಲ್ಸ್ ಹಾಗೂ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಅಶೋಕ ಬುಕ್ಸ್ ಅಂಡ್ ಸ್ಟೇಷನರೀಸ್ ಅಂಗಡಿಗಳ ಬಾಗಿಲು ಮುರಿದು ಲಕ್ಷಾಂತ ನಗದು ಹಾಗು ಬೆಳೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ದೀಪಾವಳಿಯ ಸಂಭ್ರಮದಲ್ಲೇ ಕಳ್ಳರು ಈ ಕೃತ್ಯ ಎಸಗಿದ್ದು, ಜನರು ಆತಂಕಗೊಂಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಕಳ್ಳರ ಪತ್ತೆಗೆ ತಂಡಗಳನ್ನು ರಚನೆ ಮಾಡಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ