ಕಣ್ಣು ಕಿತ್ತುಕೊಂಡ ರಾಕೆಟ್ ಪಟಾಕಿ !


19-10-2017 417

ಬೆಂಗಳೂರು: ಪಟಾಕಿ ಅವಘಡದ ಪರಿಣಾಮ ಯುವಕನೊರ್ವ ತನ್ನ ಎಡಗಣ್ಣು ಕಳೆದುಕೊಂಡ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ. ಆಡುಗೋಡಿಯ ಎಲ್.ಆರ್.ನಗರದಲ್ಲಿ ವಾಸವಾಗಿದ್ದ ಶಾರುಕ್ ನಿನ್ನೆ ಮನೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಯಾರೋ ಹೊಡೆದ ರಾಕೆಟ್ ಬಂದು ಆತನ ಕಣ್ಣಿಗೆ ತಾಗಿದೆ. ಇದರಿಂದ ತೀವ್ರ ಕಣ್ಣಿಗೆ ತೀವ್ರ ಗಾಯವಾಗಿದ್ದು, ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಚಿಕಿತ್ಸೆ ಬಳಿಕ  ವೈದ್ಯರು ಎಡಗಣ್ಣಿಗೆ ಗಂಭೀರ ಗಾಯವಾಗಿರೋದರಿಂದ ಎಡಗಣ್ಣು ದೃಷ್ಟಿಹೀನವಾಗಿದೆ ಎಂದು ತಿಳಿಸಿದ್ದಾರೆ. ಯಾರೋ ಹೊಡೆದ ಪಟಾಕಿಯಿಂದ ಇಂದು ಯುವಕನೊರ್ವ ದೃಷ್ಟಿ ಹೀನನಾಗಿರುವುದು ದುರಂತವೇ ಸರಿ. ಯಾವುದಕ್ಕೂ ತುಸು ಎಚ್ಚರಿಕೆಯಿಂದಿರುವುದು ಒಳ್ಳೆಯದು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಪಟಾಕಿ ಅವಘಡ ದೃಷ್ಟಿ ಹೀನ