ರಸ್ತೆ ಅವ್ಯವಸ್ಥೆಗೆ ಲೋಕಾಯುಕ್ತ ಗರಂ…

ಇತ್ತೀಚೆಗೆ, ಬೆಂಗಳೂರು ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಕಾರಣದಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಗಮನಹರಿಸಿರುವ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಸಿಕೊಂಡಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಮೆಟ್ರೋ ರೈಲು ನಿಗಮದ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲ ಮತ್ತು ವಿವಿಧ ವಿಭಾಗಗಳ ಎಂಜಿನಿಯರ್ಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ನೊಟೀಸ್ ಜಾರಿಮಾಡಿದ್ದಾರೆ.
ಕೆಎಂಸಿ ಕಾಯ್ದೆ ಅನ್ವಯ, ಬಿಬಿಎಂಪಿಯವರು ರಸ್ತೆಗಳನ್ನು ನಿರ್ವಹಿಸಬೇಕು, ಶೀಘ್ರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿರುವ ಲೋಕಾಯುಕ್ತರು, ಅಕ್ಟೋಬರ್ 23ರ ಸಂಜೆ 4 ಗಂಟೆಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಲು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಬಿಡಿ