ದೇಶಾದ್ಯಂತ ಲಾರಿ ಮುಷ್ಕರ…


10-10-2017 385

ಡೀಸೆಲ್ ಡೀಸೆಲ್‌ ಇಂಧನವನ್ನು, ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು, ಡೀಸೆಲ್‌ ಬೆಲೆ ಇಳಿಸಬೇಕು ಮತ್ತು ಟೋಲ್‌ಗಳಲ್ಲಿ ಕಿರುಕುಳ ತಪ್ಪಿಸಬೇಕು ಎಂದು  ಒತ್ತಾಯಿಸಿ, ಅಖಿಲ ಭಾರತ ಲಾರಿ ನಿರ್ವಾಹಕರ ಸಂಘಟನೆ (ಎಐಎಂಟಿಸಿ) ಕರೆ ನೀಡಿದ್ದ ಮುಷ್ಕರಿಂದಾಗಿ ದೇಶದಾದ್ಯಂತ ಸರಕು ಪೂರೈಕೆ ವ್ಯತ್ಯಯವಾಗಿದೆ. ಇದರಿಂದ ಈಗಾಗಲೇ ಸುಮಾರು 2,000 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಸಂಚರಿಸುವ 6 ಲಕ್ಷ ಲಾರಿಗಳ ಪೈಕಿ, ಸುಮಾರು ನಾಲ್ಕೂವರೆ ಲಕ್ಷ ಲಾರಿಗಳು ಸಂಚಾರ ನಿಲ್ಲಿಸಿದ್ದು, ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ 150 ಕೋಟಿ ರೂಪಾಯಿಗಳಷ್ಟು ವಹಿವಾಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಲಾರಿ ಮಾಲೀಕರು ಮತ್ತು ಚಾಲಕರು, ರಾಜ್ಯದ ಹೆದ್ದಾರಿ, ಟರ್ಮಿನಲ್‌, ಪ್ರಮುಖ ಗೋದಾಮುಗಳು ಹಾಗೂ ಎಪಿಎಂಸಿ ಆವರಣದಲ್ಲೇ ಲಾರಿಗಳನ್ನು ನಿಲುಗಡೆ ಮಾಡಿದ್ದರು.

ಹಣ್ಣು–ತರಕಾರಿ, ಹಾಲು, ಔಷಧಿ, ಪೆಟ್ರೋಲ್–ಡೀಸೆಲ್‌ ಟ್ಯಾಂಕರ್‌ ಗಳನ್ನು ಬಿಟ್ಟು, ಉಳಿದೆಲ್ಲ ವಸ್ತುಗಳ ಸಾಗಣೆ ಬಂದ್‌ ಆಗಿದೆ. ಮರಳು, ಜಲ್ಲಿ ಕಲ್ಲು, ಇಟ್ಟಿಗೆ ಹಾಗೂ ಸಿಮೆಂಟ್ ತುಂಬಿದ್ದ ಲಾರಿಗಳು ಹೆದ್ದಾರಿ ಬದಿಯಲ್ಲಿ ಸಾಲುಗಟ್ಟಿ ನಿಂತಿವೆ. ಇದರಿಂದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ.


ಒಂದು ಕಮೆಂಟನ್ನು ಬಿಡಿ