ಟ್ವಿಟ್ಟರ್ ಕಿಂಗ್…ಡೋನಲ್ಡ್ ಟ್ರಂಪ್


05-10-2017 1042

ಅಮೆರಿಕದ ಅಧ್ಯಕ್ಷ ಡೋನಲ್ಡ್ ಟ್ರಂಪ್ ಆನ್‌ ಲೈನ್ ಸುದ್ದಿ ಮತ್ತು ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರ್‌ ನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮುಖಂಡರಾಗಿ ಹೊರಹೊಮ್ಮಿದ್ದಾರೆ.

ಇಲ್ಲಿಯವರೆಗೂ ಮೊದಲ ಸ್ಥಾನದಲ್ಲಿದ್ದ ಕ್ರಿಶ್ಚಿಯನ್ ಧರ್ಮದ ಪ್ರಧಾನ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಗೆ 3 ಕೋಟಿ 97 ಲಕ್ಷ ಹಿಂಬಾಲಕರಿದ್ದಾರೆ. 3 ಕೋಟಿ 95 ಲಕ್ಷ ಹಿಂಬಾಲಕರನ್ನು ಹೊಂದಿರುವ ಪೋಪ್ ಎರಡನೇ ಸ್ಥಾನಕ್ಕಿಳಿದಿದ್ದಾರೆ.

ಟ್ವಿಟ್ಚರ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕರ ಸಾಲಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ. 3 ಕೋಟಿ 49 ಲಕ್ಷ ಹಿಂಬಾಲಕರನ್ನು ಹೊಂದಿರುವ ಮೋದಿ, ಪೋಪ್ ನಂತರದ ಸ್ಥಾನದಲ್ಲಿದ್ದಾರೆ.


ಒಂದು ಕಮೆಂಟನ್ನು ಬಿಡಿ