ಇಬ್ಬರು ಬಾಲಕರು ಸಮುದ್ರಪಾಲು !


03-10-2017 840

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ, ಮುರ್ಡೇಶ್ವರದ ಸಣ್ಣಬಾವಿ ಕಡಲ ತೀರದಲ್ಲಿ ಆಡವಾಡುತ್ತಿದ್ದ ಬಾಲಕರಿಬ್ಬರು ನೀರುಪಾಲಾದ ದಾರುಣ ಘಟನೆ ನಡೆದಿದೆ. ನಿನ್ನೆ ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ ವೇಳೆ, ಗಣೇಶ್‌ ನಾಯ್ಕ(11), ವಿನಾಯಕ ನಾಯ್ಕ(13) ಗಣೇಶ್ ಎಂಬಿಬ್ಬರು ಬಾಲಕರು ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದರು, ಇನ್ನು ನಿನ್ನೆ ಕಾಣೆಯಾಗಿದ್ದ, ಇಬ್ಬರು ಬಾಲಕರ ಶವಗಳು, ಇಂದು ಕಾಯ್ಕಿಣಿ ತೀರ ಪ್ರದೇಶದಲ್ಲಿ ಪತ್ತೆಯಾಗಿವೆ. ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

 


ಒಂದು ಕಮೆಂಟನ್ನು ಬಿಡಿ