ಪ್ರಶ್ನಿಸುವ ಹಕ್ಕಿದೆ ನನಗೆ !


03-10-2017 415

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರಕಾಶ್ ರಾಜ್ ವಿರುದ್ಧ ಹಲವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರಕಾಶ್​ ರಾಜ್​ ವಿರುದ್ಧ ವ್ಯಕ್ತವಾಗುತ್ತಿರುವ ಭಾರಿ ಟೀಕೆ ಹಿನ್ನೆಲೆ,  ಪ್ರಕಾಶ್ ರಾಜ್‌ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿಗಳನ್ನ ವಾಪಸ್ ನೀಡುವುದಾಗಿ ಹೇಳಿಲ್ಲ, ನನ್ನ ಶ್ರಮದಿಂದ ನಾನು ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಾನೇಕೆ ಹಿಂತಿರುಗಿಸಲಿ ಎಂದು ಹೇಳಿದ್ದಾರೆ.

ಗೌರಿ ಲಂಕೇಶ್ ಹತ್ಯೆಯನ್ನು ಕೆಲವರು ಸಂಭ್ರಮಿಸಿದ್ದಾರೆ. ಈ ಬಗ್ಗೆ ನನಗೆ ನೋವಿದೆ. ಪ್ರಧಾನಿ ಮೋದಿ ಅವರನ್ನ ಸಾಕಷ್ಟು ಜನ ಫಾಲೋ ಮಾಡ್ತಾರೆ. ಆದರೆ, ಗೌರಿ ಹತ್ಯೆಯ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ. ಇದು ನನಗೆ ತುಂಬಾ ಬೇಸರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಜೆಯಾಗಿ ನನಗೆ ಮೋದಿಯವರನ್ನ ಕೇಳುವ ಹಕ್ಕಿದೆ. ಗೌರಿ ಹತ್ಯೆಯಿಂದ ನನಗೆ ತುಂಬಾ ಬೇಸರ, ನೋವಾಗಿದೆ. ಹತ್ಯೆಯ ಬಗ್ಗೆ ಯಾವುದೇ ನಿಲುವನ್ನ ವ್ಯಕ್ತಪಡಿಸಿಲ್ಲ. ನಾನು ಯಾವುದೇ ಪಕ್ಷದವನಲ್ಲ. ದೇಶದ ಪ್ರಜೆಯಾಗಿ ಯಾವುದೇ ಪಕ್ಷದ ಬಗ್ಗೆ ಮಾತನಾಡಿಲ್ಲ. ನಮ್ಮ ಪ್ರಧಾನಿ ಮೌನದ ಬಗ್ಗೆ ಮಾತನಾಡಿದ್ದೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ