ನೆಹರು: ಅಪಹಾಸ್ಯ ಮಾಡುವವರು ದೇಶ ದ್ರೋಹಿ


28-09-2017 1871

ಬಾಗಲಕೋಟೆ: ಅಲ್ಪ ಸಂಖ್ಯಾತರು ಮತೀಯವಾದಿಯಾದ್ರೆ ಆ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತರು ಮತೀಯವಾದಿಯಾದ್ರೆ ದೇಶಕ್ಕೇ ಅಪಾಯವೆಂದು ಸಚಿವ ರಮಾನಾಥ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಜಮಖಂಡಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಅಶಾಂತಿಗೆ ಕಾರಣ ಮತೀಯವಾದ. ಇದಕ್ಕೆ ಕಾರಣ ಬಿಜೆಪಿ ಹಾಗೂ ಎಸ್.ಟಿ.ಪಿ.ಐ ಸಂಘನೆಗಳು. ಇಂತಹ ಮತೀಯವಾದಿಗಳಿಂದಲೇ ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಂದರೆ ಇದುವರೆಗೆ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ ನಡೆದಿಲ್ಲ,   ಕೇವಲ ಮತೀಯವಾದಿಗಳ ಹತ್ಯೆ ನಡೆದಿವೆ ಎಂದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ಅನುದಾನ ನಿಲ್ಲಿಸಿದ ವಿಚಾರವಾಗಿ ಮಾತನಾಡಿದ ರೈ, ರಾಜ್ಯದಲ್ಲಿ ಎಲ್ಲೂ ಇರದ ವ್ಯವಸ್ಥೆ ಅಲ್ಲಿತ್ತು. ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ ಪ್ರಭಾಕರ್‌ ಭಟ್‌ ಶಾಲೆಗೆ ಆಹಾರ ನೀಡಲಾಗುತ್ತಿತ್ತು. ಆದರೆ ಅಲ್ಲಿ ಉಪಾಹಾರ ಹಣದ ರೂಪದಲ್ಲಿ ಹೋಗ್ತಾ ಇತ್ತು.

ಇದನ್ನು ತಡೆದು ಸರ್ಕಾರದಿಂದ ಬಿಸಿಯೂಟ ನೀಡುತ್ತೇವೆ ಎಂದರೆ ಅವರು ನಿರಾಕರಿಸಿದ್ದಾರೆ. ಏಕೆಂದರೆ ಪ್ರಭಾಕರ್‌ ಭಟ್ರು ತಮ್ಮ ಶಾಲೆಗೆ ಮೂಕಾಂಬಿಕೆ ದೇವಾಲಯದಿಂದ ಹಣ ಪಡೆಯುತ್ತಿದ್ದರು. ಆದ್ದರಿಂದ ಸರ್ಕಾರದ ಬಿಸಿಯೂಟವನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಾನು ಸೂಲಿಬೆಲೆ ಎಂದು ಹೇಳಿ ಮುಂದೆ ನಿಲ್ಲಿಸಿದ್ದೇನೆ. ಅದನ್ನ ಮುಂದುವರೆಸಿ ಮಾತನಾಡಿಲ್ಲ. ಬದಲಾಗಿ ರಾಷ್ಟ್ರ ಭಕ್ತರು ಎಂದು ಹೇಳಿಕೊಳ್ಳುವವರ ಬಗ್ಗೆ ಹೇಳಿಕೆ ನೀಡಿದ್ದೇನೆ ಎಂದು ಸಮರ್ಥನೆ ನೀಡಿದರು.

ರಾಷ್ಟ್ರಭಕ್ತರು ಹೇಳಿಕೊಳ್ಳುವವರು ಯಾರೇ ಆಗಲಿ, ಸ್ವಾತಂತ್ರ್ಯ ಹೋರಾಟಗಾರರನ್ನ ಅಪಹಾಸ್ಯ ಮಾಡುವುದಿಲ್ಲ. ನೆಹರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ದೇಶಕ್ಕಾಗಿ ಹತ್ತು ವರ್ಷಗಳ ಕಾಲ ಜೈಲಲ್ಲಿ ಕುಳಿತಿದ್ದರು. ಅಂತಹವರು ಹಾಗೂ ಅವರ ಕುಟುಂಬವನ್ನು ಅಪಹಾಸ್ಯ ಮಾಡುವವರು ದೇಶ ದ್ರೋಹಿಗಳು ಎಂದು ಪುನರುಚ್ಚರಿಸಿದರು.

 


ಒಂದು ಕಮೆಂಟನ್ನು ಬಿಡಿ