ಪ್ರಜ್ವಲ್ ದೇವರಾಜ್ ಬಗ್ಗೆ ಅನುಮಾನ…


28-09-2017 1736

ಬೆಂಗಳೂರಿನ ಜಯನಗರದ ಸೌತ್ ಎಂಡ್ ವೃತ್ತದ ಬಳಿ ನಡೆದ ಕಾರು ಅಪಘಾತದಲ್ಲಿ ಖ್ಯಾತ ಉದ್ಯಮಿ ಶ್ರೀನಿವಾಸ ಮೂರ್ತಿ ಅವರ ಮಗ ವಿಷ್ಣು ಅವರ ಕಾರು, ಮಾರುತಿ ಓಮ್ನಿ ಕಾರಿಗೆ ಡಿಕ್ಕಿಯಾಗಿದೆ. ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೂ ಸೇರಿದಂತೆ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು, ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಐಶಾರಾಮಿ ಮರ್ಸಿಡಿಸ್ ಬೆಂಝ್ ಕಾರಿನಲ್ಲಿದ್ದವರಿಗೆ ಲಾತ ಕೊಟ್ಟರೆಂದೂ ಹೇಳಲಾಗಿದೆ. ಇದೇ ವೇಳೆ, ಐಶಾರಾಮಿ ಕಾರಿನಲ್ಲಿ ನಟ ಪ್ರಜ್ವಲ್ ದೇವರಾಜ್ ಸೇರಿದಂತೆ, ಇಬ್ಬರು ನಟರೂ ಇದ್ದರು ಎಂದು ಹೇಳಲಾಗುತ್ತಿದೆ.  ನಟ ಪ್ರಜ್ವಲ್ ದೇವರಾಜ್ ಅವರು, ಆದಿಕೇಶವಲು ಮೊಮ್ಮಗ ವಿಷ್ಣು ಅವರ ಆಪ್ತ ಸ್ನೇಹಿತರೆಂದೂ ತಿಳಿದುಬಂದಿದೆ. ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ 200 ಗ್ರಾಮ್ ಗಾಂಜಾ ಸಿಕ್ಕಿದೆ ಅನ್ನುವ ವಿಚಾರವನ್ನು ಪೊಲೀಸರು ದೃಢೀಕರಿಸಿದ್ದಾರೆ, ಆದರೆ, ಕಾರಿನಲ್ಲಿ ಪ್ರಜ್ವಲ್ ದೇವರಾಜ್ ಕೂಡ ಇದ್ದರು ಅನ್ನುವುದನ್ನು ದೃಢಿಕರಿಸಲು ನಿರಾಕರಿಸಿದ್ದಾರೆ. ಪೊಲೀಸರ ಈ ನಡೆ ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಮಾಡಿದೆ. 

 

 

 

 


ಒಂದು ಕಮೆಂಟನ್ನು ಬಿಡಿ